ನವದೆಹಲಿ: ದೇಶದ ಭದ್ರತೆಯನ್ನೇ ಆದ್ಯತೆಯಾಗಿಸಿಕೊಂಡ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷದ ಮೊದಲ ಹಾಗೂ ಬೃಹತ್ ಒಪ್ಪಂದಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಯನ್ನು ಬಲಗೊಳಿಸಲು ಅಮೆರಿಕಾದೊಂದಿಗೆ 17,500 ಕೋಟಿ ರೂ ಬೃಹತ್ ಮೊತ್ತದ ಹೆಲಿಕಾಪ್ಟರ್ ಖರೀದಿ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 Martin-Sikorsky MH-60R ಹೆಲಿಕಾಪ್ಟರ್ಗಳನ್ನು ಖರೀದಿಸುವ ಮೂಲಕ ನೌಕಾಬಲ ಹೆಚ್ಚಿಸಲಾಗುತ್ತೆ. ಈ ಒಪ್ಪಂದ ಅಮೆರಿಕ ಸರ್ಕಾರದ ವಿದೇಶಿ ಸೇನಾ ಮಾರಾಟ ಕಾರ್ಯಕ್ರಮದಡಿ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಯಲ್ಲಿ ಕಠಿಣ ಸಂಕೀರ್ಣ ಕಾರ್ಯಾಚರಣೆ ಮಾಡುವ ಹೆಲಿಕಾಪ್ಟರುಗಳ ಅವಶ್ಯಕತೆ ಇದೆ. ಎರಡು ದಶಕಗಳ ಹಿಂದಿದ್ದ Sea King 42/42A fleetಗಳ ಬದಲಾಗಿ ಈ ಮಲ್ಟಿ ರೋಲ್ ವಿಮಾನಗಳನ್ನು ಖರೀದಿ ಮಾಡಲಾಗ್ತಿದೆ. ಇದೇ ಅಕ್ಬೋಬರ್ - ನವಂಬರ್ನಲ್ಲಿ ಈ ಒಪ್ಪಂದ ನಡೆಯುವ ಸಾಧ್ಯತೆಯಿದೆ. ಇದಾದ 18 ತಿಂಗಳಲ್ಲಿ ಹೆಲಿಕ್ಯಾಪ್ಟರ್ಗಳ ಪೂರೈಕೆ ಪ್ರಕ್ರಿಯೆ ನಡೆಯಲಿದ್ದು, 2022ರ ವೇಳೆಗೆ ಅಷ್ಟೂ ಹೆಲಿಕ್ಯಾಪ್ಟರ್ಗಳ ಪೂರೈಕೆಯಾಗಲಿದೆ ಎನ್ನಲಾಗಿದೆ.
ಯುದ್ಧನೌಕೆಗಳ ಮೂಲಕ ಕಾರ್ಯಾಚರಣೆ ನಡೆಸುವ ಈ ಹೆಲಿಕಾಪ್ಟರ್ಗಳು AGM-114 Hellfire ಮಿಸೈಲ್, MK 54 torpedoe ಹಾಗೂ ಅತ್ಯಾಧುನಿಕ ರಾಕೆಟ್ಗಳನ್ನೂ ಹೊಂದಿರಲಿದೆ.
ಇಷ್ಟೇ ಅಲ್ಲದೆ, 111 ನೇವಲ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ಭಾರತದಲ್ಲಿಯೇ ತಯಾರಿಸಲು ಕೇಂದ್ರ ಪ್ಲಾನ್ ಮಾಡಿದೆ.