ETV Bharat / bharat

ಹಥ್ರಾಸ್​ ಘಟನೆ: ಬಾಲಿವುಡ್​ ನಟಿ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಗೆ ನೋಟಿಸ್

ಹಥ್ರಾಸ್​ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಸೇರಿದಂತೆ ಕೆಲ ಪ್ರಸಿದ್ಧ ವ್ಯಕ್ತಿಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್​ ನೀಡಿದೆ.

ncw sends notices, ncw sends notices to three person, ncw sends notices to three person including bollywood actress, hathras rape and murder, hathras rape and murder case, hathras rape and murder news, hathras rape and murder latest news, ಬಾಲಿವುಡ್​ ನಟಿ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಗೆ ನೋಟಿಸ್​, ಬಾಲಿವುಡ್​ ನಟಿ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳಿಗೆ ಎನ್‌ಸಿಡಬ್ಲ್ಯು ನೋಟಿಸ್​, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಸುದ್ದಿ,
ಸಂಗ್ರಹ ಚಿತ್ರ
author img

By

Published : Oct 7, 2020, 10:02 AM IST

ನವದೆಹಲಿ: ಹಥ್ರಾಸ್​ ಸಂತ್ರಸ್ತೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರಸಿದ್ಧ ವ್ಯಕ್ತಿಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿದೆ.

ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಲ್ವಿಯಾ, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಬಾಲಿವುಡ್​ ನಟಿ ಸ್ವರ ಭಾಸ್ಕರ್ ಅವರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ, ಆಕ್ಷೇಪಾರ್ಹ ಪೋಸ್ಟ್​ಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸೂಚಿಸಿದೆ.

ಹಥ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಯುವತಿಯ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ ಕುರಿತು ಈ ವ್ಯಕ್ತಿಗಳಿಂದ ಆಯೋಗ ವಿವರಣೆ ಕೋರಿದೆ. ಮಹಿಳಾ ಆಯೋಗವು ಈ ಮೂವರಿಗೆ ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ತಕ್ಷಣ ತೆಗೆದುಹಾಕುವಂತೆ ಸೂಚಿಸಿದೆ. ದಯವಿಟ್ಟು ಇಂತಹ ಪೋಸ್ಟ್​ಗಳನ್ನು ಹಾಕಬೇಡಿ ಎಂದು ಮನವಿಯನ್ನೂ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.