ETV Bharat / bharat

370ನೇ ವಿಧಿ ರದ್ದು; ಸುಪ್ರೀಂ ಮೆಟ್ಟಿಲೇರಿದ ಎನ್​ಸಿಪಿ - Will the removal of Article 370

ಜಮ್ಮು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷ ಸುಪ್ರಿಂಕೋರ್ಟ್​ ಮೆಟ್ಟಿಲೇರಿದೆ.

NC moves SC against Centre’s 370 move
author img

By

Published : Aug 11, 2019, 6:50 AM IST

ನವದೆಹಲಿ: ಜಮ್ಮು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷ ಸುಪ್ರಿಂಕೋರ್ಟ್​ ಮೆಟ್ಟಿಲೇರಿದ್ದು, ಇದು ಅಸಾಂವಿಧಾನಿಕ ನಡೆ ಎಂದು ಪಕ್ಷ ಆರೋಪಿಸಿದೆ.
ನ್ಯಾಷನಲ್​ ಕಾನ್ಫರೆನ್ಸ್ ಸಂಸದ ಮೊಹಮ್ಮದ್ ಅಕ್ಬರ್​​ ಲೋನ್​​ ಹಾಗೂ ಹುಸೇನ್​​ ಮಸೂದಿ ಅವರು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಜಮ್ಮು-ಕಾಶ್ಮೀರ ಪುನರ್​ವಿಂಗಡಣೆ ಕಾಯ್ದೆ-2019 ಹಾಗೂ ರಾಷ್ಟ್ರಪತಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

370ನೇ ವಿಧಿ ಬದಲಿಸಲು ಅಥವಾ ರದ್ದುಮಾಡಲು ಇರುವ ಸಂವಿಧಾನಬದ್ಧ ಕಾನೂನುಗಳನ್ನು ಅನುಸರಿಸಿಲ್ಲ. ಕೇಂದ್ರ ಸರ್ಕಾರವು ಸಾಂವಿಧಾನಿಕ ಸಮಿತಿಯ ಶಿಫಾರಸಿನ ಮೇಲೆ ಮಾತ್ರ ಜಮ್ಮು & ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬಹುದು ಎಂದು ವಾದಿಸಿದ್ದಾರೆ. ಈ ಕೂಡಲೇ ರಾಷ್ಟ್ರಪತಿ ಅವರ ಆದೇಶವನ್ನು ಅನೂರ್ಜಿತಗೊಳಿಸಿ ಎಂದು ಅವರು ಆಗ್ರಹಿಸಿದ್ದಾರೆ.

Intro:Body:

empty file

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.