ETV Bharat / bharat

ಛತ್ತಿಸ್​ಗಢದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರ ಹತ್ಯೆ, ಸ್ಫೋಟದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯ - ಗಂಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಹತ್ಯೆ

ಛತ್ತಿಸ್​ಗಢದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿದೆ. ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಇಡಿ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಇಬ್ಬರು ಗ್ರಾಮಸ್ಥರನ್ನು ಹತ್ಯೆಗೈದಿದ್ದಾರೆ.

injured
ಗಂಭೀರ ಗಾಯ
author img

By

Published : Dec 1, 2020, 3:07 PM IST

ಬಿಜಾಪುರ (ಛತ್ತಿಸ್​ಗಢ): ಜಿಲ್ಲೆಯಲ್ಲಿ ಮಾವೋವಾದಿಗಳ ಅಟ್ಟಹಾಸ ಹೆಚ್ಚಾಗಿದೆ. ಬಸಗುಡ ಪೊಲೀಸ್ ಠಾಣೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ರಾಜ್​ಪೇಟಾ ಪ್ರದೇಶದಲ್ಲಿ ನಕ್ಸಲರು ಐಇಡಿ ಸ್ಫೋಟಗೊಳಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ನಡುರಸ್ತೆಯಲ್ಲಿ ಹುದುಸಿಟ್ಟಿದ್ದ ಸುಧಾರಿತ ಸ್ಫೋಟಕದ ಮೇಲೆ ವಾಹನವೊಂದು ಹರಿದುಹೋದ ಸ್ಫೋಟಗೊಂಡಿದೆ. ಇಬ್ಬರು ಗಾಯಗೊಂಡಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರನ್ನು ಗುರಿಯಾಗಿಸಿಕೊಂಡು ಐಇಡಿ ಇಟ್ಟಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲಾಲೋಚನ್ ಕಶ್ಯಪ್ ತಿಳಿಸಿದ್ದಾರೆ.

ಅಲ್ಲದೆ ಗಂಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಇಬ್ಬರನ್ನು ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಈವರೆಗೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ.

ದಂತೇವಾಡದಲ್ಲಿ ಸರ್ಪಂಚ್ ಪತಿ ಸಂತೋಷ್ ಕಶ್ಯಪ್ ಎಂಬಾತನನ್ನು ನಕ್ಸಲರು ಕೊಲೆ ಮಾಡಿದ್ದಾರೆ ಎಂದು ಎಸ್​ಪಿ ಅಭಿಷೇಕ್ ಪಲ್ಲವ ಮಾಹಿತಿ ನೀಡಿದ್ದಾರೆ.

ಕಳೆದ ಶನಿವಾರ ಸುಕ್ಮಾದಲ್ಲಿ ನಕ್ಸಲರು ಸಿಆರ್​ಪಿಎಫ್​​​ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಗೊಳಿಸಿದ್ದರು. ಘಟನೆಯಲ್ಲಿ ಸಿಆರ್​ಪಿಎಫ್​ನ ಸಹಾಯಕ ಕಮಾಂಡೆಂಟ್ ನಿತಿನ್ ಭಲೇರಾವ್​​​ ಹುತಾತ್ಮರಾಗಿದ್ದು, 9 ಜನರು ಗಂಭೀರವಾಗಿ ಗಾಯಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.