ETV Bharat / bharat

ಸಹೋದರಿ ಮನವಿಗೆ ಮನ್ನಣೆ: ರಕ್ಷಾ ಬಂಧನ ದಿನವೇ ಮೋಸ್ಟ್​ ವಾಂಟೆಡ್​ ನಕ್ಸಲ್ ಪೊಲೀಸರಿಗೆ ಶರಣು..! - Raksha Bandhan

ತನ್ನ ಸಹೋದರಿಯ ಮನವಿಯ ಮೇರೆಗೆ ರಕ್ಷಾ ಬಂಧನದ ದಿನದಂದೇ ಛತ್ತೀಸ್​ಗಢದ ದಾಂತೇವಾಡದ ಮೋಸ್ಟ್​ ವಾಂಟೆಡ್​ ನಕ್ಸಲ್ ಓರ್ವ ಪೊಲೀಸರಿಗೆ ಶರಣಾಗಿದ್ದಾನೆ.

Raksha Bandhan
ನಕ್ಸಲ್ ಪೊಲೀಸರಿಗೆ ಶರಣು
author img

By

Published : Aug 3, 2020, 12:27 PM IST

ದಾಂತೇವಾಡ (ಛತ್ತೀಸ್​ಗಢ): ಇಂದು ದೇಶದೆಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ಸಹೋದರ-ಸಹೋದರಿಯರ ಬಂಧಕ್ಕೆ ಮುಡಿಪಾಗಿರುವ ದಿನವಿದು. ಆದರೆ, ಇಂದು ಇಲ್ಲೊಬ್ಬ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಿದ್ದರೂ ಇಬ್ಬರ ಮುಖದಲ್ಲಿ ಸಂತೋಷ ಮಾತ್ರ ಮಾಯವಾಗಿದೆ.

ರಕ್ಷಾ ಬಂಧನ ದಿನದಂದೇ ಮೋಸ್ಟ್​ ವಾಂಟೆಡ್​ ನಕ್ಸಲ್ ಪೊಲೀಸರಿಗೆ ಶರಣು

ಹೌದು.. ತನ್ನ ಸಹೋದರಿಯ ಮನವಿಯ ಮೇರೆಗೆ ಮೋಸ್ಟ್​ ವಾಂಟೆಡ್​ ನಕ್ಸಲ್ ಓರ್ವ ಪೊಲೀಸರಿಗೆ ಶರಣಾಗಿದ್ದಾನೆ. ಛತ್ತೀಸ್​ಗಢದ ದಾಂತೇವಾಡದ ಮಲ್ಲಾ ಎಂಬ ನಕ್ಸಲ್ ಪೊಲೀಸರ ಕಣ್ತಪ್ಪಿಸಿಕೊಂಡು ಅಹಿತಕರ ಚಟುವಟಿಕೆಗಳಲ್ಲಿ ತೊಡಗಿದ್ದನು. ಈತನನ್ನು ಹಿಡಿಯಲು ಅನೇಕ ದಿನಗಳಿಂದ ಪೊಲೀಸರು ಹರಸಾಹಸ ಪಡುತ್ತಿದ್ದರು. ಇವನನ್ನು ಹುಡುಕಿ ಕೊಟ್ಟವರಿಗೆ 8 ಲಕ್ಷ ರೂ. ಬಹುಮಾನ ಕೂಡ ಘೋಷಿಸಿದ್ದರು. ಆದರೆ ಇಂದು ಸಹೋದರಿಯ ಮನವಿಯ ಮೇರೆಗೆ ರಾಖಿ ಕಟ್ಟಿಸಿಕೊಳ್ಳಲು ಬಂದು ಶರಣಾಗಿದ್ದಾನೆ.

ಮಲ್ಲಾ, ನಕ್ಸಲ್ ಡೆಪ್ಯೂಟಿ ಕಮಾಂಡರ್ ಆಗಿದ್ದು, ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಕೆಲ ಪೊಲೀಸ್ ಸಿಬ್ಬಂದಿಯ ಹತ್ಯೆಯ ಆರೋಪವೂ ಇವನ ಮೇಲಿತ್ತು ಎಂದು ದಾಂತೇವಾಡ ಎಸ್ಪಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.