ETV Bharat / bharat

ಪರಿಸರ ಸ್ನೇಹಿ ಕ್ರಮಗಳಿಂದ 39 ಕೋಟಿ ಉದ್ಯೋಗ ಸೃಷ್ಟಿಯ ಅವಕಾಶ ! - ಮೂಲಭೂತ ಸೌಕರ್ಯಗಳು

ಜೈವಿಕ ಸಮತೋಲನವನ್ನು ಕಾಪಾಡಿಕೊಂಡು ಮತ್ತೆ ಆರ್ಥಿಕ ಸ್ಥಿತಿಯನ್ನು ಹಳಿಗೆ ತರಲು ವಿಶ್ವದ ದೇಶಗಳು ಪ್ರಯತ್ನಿಸಿದಲ್ಲಿ ಕೋಟ್ಯಂತರ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಕೋವಿಡ್​ ಬಿಕ್ಕಟ್ಟಿನ ನಂತರ ಹಳಿ ತಪ್ಪಿರುವ ಅರ್ಥವ್ಯವಸ್ಥೆಯನ್ನು ಮತ್ತೆ ಸರಿಪಡಿಸುವ ಕೂಗು ಜೋರಾಗುತ್ತಿದೆ. ಇಂಥ ಸಮಯದಲ್ಲಿ ನಮ್ಮ ಆಹಾರ ಪೂರೈಕೆ ಸರಪಳಿಯನ್ನು ಸುಸೂತ್ರವಾಗಿಟ್ಟು, ಲಭ್ಯವಿರುವ ಮೂಲಭೂತ ಸೌಕರ್ಯಗಳ ಸಹಾಯದಿಂದ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಸಿಕೊಳ್ಳುವತ್ತ ಹೆಜ್ಜೆ ಇಡಬೇಕಾಗಿದೆ ಎಂದು ಡಬ್ಲ್ಯೂಇಎಫ್​ ನ ನೇಚರ್ ಆ್ಯಕ್ಷನ್ ಅಜೆಂಡಾ ವಿಭಾಗದ ಮುಖ್ಯಸ್ಥೆ ಆಕಾಂಕ್ಷಾ ಖತ್ರಿ ಹೇಳಿದ್ದಾರೆ.

Nature-positive' solutions can create 39.5 crore jobs

author img

By

Published : Jul 16, 2020, 6:10 PM IST

ಜಿನೀವಾ (ಸ್ವಿಟ್ಜರ್​ಲೆಂಡ್​): ಮುಂದಿನ ಒಂದು ದಶಕದಲ್ಲಿ 10.1 ಟ್ರಿಲಿಯನ್ ಡಾಲರ್ ವ್ಯವಹಾರದಷ್ಟು ಮೊತ್ತದ 39.5 ಕೋಟಿ ಹೊಸ ಉದ್ಯೋಗಗಳನ್ನು ಜಗತ್ತಿನಲ್ಲಿ ಸೃಷ್ಟಿಸಲು ಉದ್ಯಮಿಗಳಿಗೆ ಅವಕಾಶ ತೆರೆದುಕೊಂಡಿದೆ ಎಂದು ವಿಶ್ವ ಆರ್ಥಿಕ ವೇದಿಕೆ (World Economic Forum -WEF) ಹೇಳಿದೆ.

2030ರ ವೇಳೆಗೆ ಪರಿಸರ ಸ್ನೇಹಿ ಉಪಾಯಗಳ ಮೂಲಕ 39.5 ಕೋಟಿ ಉದ್ಯೋಗಗಳ ಸೃಷ್ಟಿಗೆ ಅವಕಾಶವಿದೆ ಎಂದು ಡಬ್ಲ್ಯೂಇಎಫ್​ ತನ್ನ 'ಪರಿಸರದ ಭವಿಷ್ಯ ಹಾಗೂ ವ್ಯಾಪಾರ' ವರದಿಯಲ್ಲಿ ಹೇಳಿದೆ.

ಪರಿಸರ ಸ್ನೇಹಿ ಉಪಾಯಗಳು ಅಂದರೆ ಉದ್ಯಮಗಳನ್ನು ಮತ್ತಷ್ಟು ಪರಿಸರ ಸ್ನೇಹಿಯನ್ನಾಗಿ ಮಾಡುವುದು, ಇರುವ ಪರಿಸರವನ್ನು ಸಮೃದ್ಧಗೊಳಿಸುವುದು ಮುಂತಾದ ಯೋಜನೆಗಳಿಂದ ಹೊಸ ಉದ್ಯೋಗಗಳು ಲಭ್ಯವಾಗಬಹುದು ಎನ್ನಲಾಗಿದೆ.

"ಜೈವಿಕ ಸಮತೋಲನವನ್ನು ಕಾಪಾಡಿಕೊಂಡು ಮತ್ತೆ ಆರ್ಥಿಕ ಸ್ಥಿತಿಯನ್ನು ಹಳಿಗೆ ತರಲು ವಿಶ್ವದ ದೇಶಗಳು ಪ್ರಯತ್ನಿಸಿದಲ್ಲಿ ಕೋಟ್ಯಂತರ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಕೋವಿಡ್​ ಬಿಕ್ಕಟ್ಟಿನ ನಂತರ ಹಳಿ ತಪ್ಪಿರುವ ಅರ್ಥವ್ಯವಸ್ಥೆಯನ್ನು ಮತ್ತೆ ಸರಿಪಡಿಸುವ ಕೂಗು ಜೋರಾಗುತ್ತಿದೆ. ಇಂಥ ಸಮಯದಲ್ಲಿ ನಮ್ಮ ಆಹಾರ ಪೂರೈಕೆ ಸರಪಳಿಯನ್ನು ಸುಸೂತ್ರವಾಗಿಟ್ಟು, ಲಭ್ಯವಿರುವ ಮೂಲಭೂತ ಸೌಕರ್ಯಗಳ ಸಹಾಯದಿಂದ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಸಿಕೊಳ್ಳುವತ್ತ ಹೆಜ್ಜೆ ಇಡಬೇಕಾಗಿದೆ." ಎಂದು ಡಬ್ಲ್ಯೂಇಎಫ್​ ನ ನೇಚರ್ ಆ್ಯಕ್ಷನ್ ಅಜೆಂಡಾ ವಿಭಾಗದ ಮುಖ್ಯಸ್ಥೆ ಆಕಾಂಕ್ಷಾ ಖತ್ರಿ ಹೇಳಿದ್ದಾರೆ.

ಆಹಾರ, ಭೂಮಿ ಮತ್ತು ಸಮುದ್ರಗಳ ಬಳಕೆ

ಬೃಹತ್ ಗಾತ್ರದ ಕೃಷಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದು ಹಾಗೂ ಜನರಲ್ಲಿ ವೈವಿಧ್ಯಮಯ ತರಕಾರಿಗಳ ಆಹಾರದ ಬಳಕೆಯನ್ನು ಹೆಚ್ಚಿಸುವುದು ಮತ್ತು ಮೀನುಗಾರಿಕೆಯ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಲ್ಲಿ 19.1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಡಬ್ಲ್ಯೂಇಎಫ್​ ಹೇಳಿದೆ.

ಮೂಲಭೂತ ಸೌಕರ್ಯ ಹಾಗೂ ಪರಿಸರ ರಚನೆ

ಸ್ಮಾರ್ಟ್​ ಕಟ್ಟಡಗಳು, ಎಲ್ಲ ಕಡೆ ಎಲ್​ಇಡಿ ಲೈಟಿಂಗ್ ಬಳಸುವುದು, ನೀರಿನ ಪೋಲಾಗುವಿಕೆ ತಪ್ಪಿಸುವುದು, ದೂರದೃಷ್ಟಿಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ಮೂಲಕ 11.7 ಕೋಟಿ ಉದ್ಯೋಗಗಳ ಸೃಜನೆ ಸಾಧ್ಯ ಎಂದು ಡಬ್ಲ್ಯೂಇಎಫ್​ ತಿಳಿಸಿದೆ.

ಇಂಧನ ಮತ್ತು ಗಣಿಗಾರಿಕೆ

ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಇಂಧನ ಗಣಿಗಾರಿಕೆಯ ಸುಧಾರಣೆ, ಬಳಸಿದ ಅಟೊಮೊಬೈಲ್ ವಸ್ತುಗಳನ್ನು ಮತ್ತೆ ಬಳಸುವಂತೆ ದುರಸ್ತಿ ಮಾಡುವುದು, ಮರುಬಳಕೆ ಇಂಧನಗಳನ್ನು ಬಳಸುವ ಮೂಲಕ 8.7 ಕೋಟಿ ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸಬಹುದು ಎಂದು ಡಬ್ಲ್ಯೂಇಎಫ್​ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.