ETV Bharat / bharat

ಕೋವಿಡ್-19 ವೈದ್ಯಕೀಯ ಸಂಶೋಧನಾ ಸಹಕಾರಿ ನೆಟ್‌ವರ್ಕ್ ಸ್ಥಾಪನೆಗೆ ರಾಷ್ಟ್ರೀಯ ಕಾರ್ಯಪಡೆ ಶಿಫಾರಸು.. - ಭಾರತೀಯ ವೈದ್ಯಕೀಯ ಸಂಶೋದನಾ ಮಂಡಳಿ(

ಪ್ರಸ್ತುತ ಕೋವಿಡ್​ 19 ರೋಗಿಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಆಸ್ಪತ್ರೆಗಳನ್ನು ಈ ನೆಟ್​ವರ್ಕ್​ನಲ್ಲಿ ಪಾಲುದಾರರಾಗಲು ಆಹ್ವಾನಿಸಲಾಗಿದೆ. ಪ್ರಸ್ತುತ ಆಸ್ಪತ್ರೆಗಳು ಸಂಬಂಧಪಟ್ಟ ಡೇಟಾವನ್ನು ಕೇಂದ್ರ/ರಾಜ್ಯ ಆರೋಗ್ಯ ಇಲಾಖೆಗಳಿಗೆ ಸ್ವತಂತ್ರವಾಗಿ ನೀಡುತ್ತಿವೆ ಎಂಬ ಮಾಹಿತಿಯನ್ನು ಐಸಿಎಂಆರ್​ ತಿಳಿಸಿದೆ.​

ಭಾರತೀಯ ವೈದ್ಯಕೀಯ ಸಂಶೋದನಾ ಮಂಡಳಿ
ಭಾರತೀಯ ವೈದ್ಯಕೀಯ ಸಂಶೋದನಾ ಮಂಡಳಿ
author img

By

Published : Apr 8, 2020, 11:28 AM IST

ನವದೆಹಲಿ : ರಾಷ್ಟ್ರೀಯ ಕಾರ್ಯಪಡೆ 'ಇಂಡಿಯಾ ಕೋವಿಡ್-19 ಕ್ಲಿನಿಕಲ್​ ರೀಸರ್ಚ್​ ಕೊಲಬರೇಟಿವ್​ ನೆಟ್​ವರ್ಕ್ (ಭಾರತ COVID-19 ವೈದ್ಯಕೀಯ ಸಂಶೋಧನಾ ಸಹಕಾರಿ ನೆಟ್‌ವರ್ಕ್)​'ನ ತಕ್ಷಣಕ್ಕೆ ಆತೆ ನೀಡಿ ಸ್ಥಾಪಿಸಲು ಶಿಫಾರಸು ಮಾಡಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಂಯೋಜಿಸುತ್ತಿದೆ. ಈ ನೆಟ್​ವರ್ಕ್​ನ ಮೂಲ ಉದ್ದೇಶವೆಂದರೆ ದೇಶದಲ್ಲಿ COVID-19ನ ವೈದ್ಯಕೀಯ ತಿಳುವಳಿಕೆಯನ್ನು ಹೆಚ್ಚಿಸುವುದು ಈ ನೆಟ್‌ವರ್ಕ್‌ನ ಗುರಿಯಾಗಿದೆ. ಜೊತೆಗೆ ನಿರ್ದಿಷ್ಟ ಮ್ಯಾನೇಜ್​ಮೆಂಟ್​ನ​ ಪ್ರೋಟೋಕಾಲ್​ಗಳನ್ನು ಅಭಿವೃದ್ದಿಪಡಿಸುವುದು ಹಾಗೂ ಚಿಕಿತ್ಸಕರಿಗಾಗಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದಾಗಿದೆ.

ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್-19 ಪ್ರಕರಣಗಳ ವೈದ್ಯಕೀಯ ಹಾಗೂ ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ದತ್ತಾಂಶಗಳನ್ನ ರಚಿಸಲಾಗುತ್ತಿದೆ. ಪ್ರಸ್ತುತ ಕೋವಿಡ್​ 19 ರೋಗಿಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಆಸ್ಪತ್ರೆಗಳನ್ನು ಈ ನೆಟ್​ವರ್ಕ್​ನಲ್ಲಿ ಪಾಲುದಾರರಾಗಲು ಆಹ್ವಾನಿಸಲಾಗಿದೆ. ಪ್ರಸ್ತುತ ಆಸ್ಪತ್ರೆಗಳು ಸಂಬಂಧಪಟ್ಟ ಡೇಟಾವನ್ನು ಕೇಂದ್ರ/ರಾಜ್ಯ ಆರೋಗ್ಯ ಇಲಾಖೆಗಳಿಗೆ ಸ್ವತಂತ್ರವಾಗಿ ನೀಡುತ್ತಿವೆ ಎಂಬ ಮಾಹಿತಿಯನ್ನು ಐಸಿಎಂಆರ್​ ತಿಳಿಸಿದೆ.​

ಕೋವಿಡ್-19ಗಾಗಿ ಸಂಶೋಧನಾ ಆದ್ಯತೆಗಳನ್ನು ಗುರುತಿಸಲು ಮತ್ತು ಸಂಶೋಧನಾ ಅಧ್ಯಯನಗಳನ್ನು ತ್ವರಿತವಾಗಿ ಪ್ರಾರಂಭಿಸಲು ರಾಷ್ಟ್ರೀಯ ಕಾರ್ಯಪಡೆ ಸಂಶೋಧನಾ ಗುಂಪುಗಳಿಗೆ ಆದೇಶ ನೀಡಿದೆ. ಈ ಗುಂಪಿನಲ್ಲಿ ವೈದ್ಯಕೀಯ ಸಂಶೋಧನಾ ಗುಂಪು, ರೋಗ ನಿರ್ಣಯ ಸಂಶೋಧನೆ ಮತ್ತು ಬಯೋಮಾರ್ಕಸ್​, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಕಣ್ಗಾವಲು, ಕಾರ್ಯಾಚಾರಣೆ ಸಂಶೋಧನೆ, ಲಸಿಕೆ/ಔಷಧಿಗಳ ಸಂಶೋಧನಾ ತಂಡಗಳು ಸೇರಿವೆ.

ಸಂಶೋಧನೆ ಆದ್ಯತೆಗಳನ್ನು ಗುರುತಿಸಲು ಸಂಶೋಧಮಾ ಶಿಷ್ಟಾಚಾರವನ್ನು ಅಭಿವೃದ್ದಿಪಡಿಸಲು ಮತ್ತು ಅಧ್ಯಯನಗಳನ್ನು ಪ್ರಾರಂಭಿಸಲು ಹಾಗೂ ಪಾಲುದಾರ ಸಂಸ್ಥೆಗಳನ್ನು ಗುರುತಿಸಲು ಈ ಗುಂಪುಗಳ ಅಧ್ಯಕ್ಷರು ಆಯಾ ಗುಂಪುಗಳ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸಲಿದ್ದಾರೆ ಎಂದು ಭಾರ್ಗವ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.