ETV Bharat / bharat

ಭಾರತೀಯ ಇತಿಹಾಸದಲ್ಲೇ ವಿಶೇಷತೆ ಹೊಂದಿದೆ 'ರಾಷ್ಟ್ರೀಯ ಕೈಮಗ್ಗ ದಿನ'

ಆಗಸ್ಟ್ 7, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು. 1905 ರಲ್ಲಿ ಗಮನಾರ್ಹವಾದ ಸ್ವದೇಶಿ ಚಳವಳಿಯನ್ನು ಅದೇ ದಿನಾಂಕದಂದು ಪ್ರಾರಂಭಿಸಿದ ಕಾರಣ ಈ ದಿನ ಭಾರತೀಯ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆ ಹೊಂದಿದೆ.

'National Handloom Day' has special significance in Indian history
ಭಾರತೀಯ ಇತಿಹಾಸದಲ್ಲೇ ವಿಶೇಷ ಪ್ರಸ್ತುತತೆ ಹೊಂದಿದೆ 'ರಾಷ್ಟ್ರೀಯ ಕೈಮಗ್ಗ ದಿನ'
author img

By

Published : Aug 7, 2020, 7:21 AM IST

ದೇಶದ ಕೈಮಗ್ಗ ನೇಕಾರರನ್ನು ಗೌರವಿಸಲು ಮತ್ತು ಕೈಮಗ್ಗ ಉದ್ಯಮವನ್ನು ಎತ್ತಿ ಹಿಡಿಯಲು ರಾಷ್ಟ್ರೀಯ ಕೈಮಗ್ಗ ದಿನವನ್ನು ವಾರ್ಷಿಕವಾಗಿ ಆಗಸ್ಟ್ 7 ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಕೈಮಗ್ಗ ದಿನವು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕೈಮಗ್ಗದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ ಮತ್ತು ನೇಕಾರರ ಆದಾಯ ಹೆಚ್ಚಿಸುತ್ತದೆ. ಕೈಮಗ್ಗ ಉದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಗಸ್ಟ್ 7 ಅನ್ನು ಜುಲೈ 2015 ರಲ್ಲಿ ರಾಷ್ಟ್ರೀಯ ಕೈಮಗ್ಗ ದಿನ ಎಂದು ಘೋಷಿಸಿತ್ತು. ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು 2015ರ ಆಗಸ್ಟ್ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಸೆಂಟೆನರಿ ಹಾಲ್‌ನಲ್ಲಿ ಉದ್ಘಾಟಿಸಿದರು. ಇದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ 6 ನೇ ವರ್ಷವಾಗಿದೆ.

ಇತಿಹಾಸ: 1905 ರಲ್ಲಿ ಬಂಗಾಳ ವಿಭಜನೆಗೆ ಮುಂದಾಗಿದ್ದ ಬ್ರಿಟಿಷ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಲ್ಕತ್ತಾ ಟೌನ್ ಹಾಲ್‌ನಲ್ಲಿ ಆಗಸ್ಟ್ 7ರಂದು ಸ್ವದೇಶಿ ಚಳವಳಿ ಪ್ರಾರಂಭಿಸಲಾಯಿತು. ಈ ದಿನದ ನೆನಪಿಗಾಗಿ ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವಾಗಿ ಆಯ್ಕೆ ಮಾಡಲಾಯಿತು. ಈ ಆಂದೋಲನವು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿತ್ತು.

ಭಾರತದಲ್ಲಿನ ರಾಜರು ಮತ್ತು ರಾಣಿಯರು ಕೈಯಿಂದ ನೇಯ್ದ ಬಟ್ಟೆಗಳನ್ನು ಧರಿಸುತ್ತಿದ್ದರು. ಅದು ಕೈಮಗ್ಗ ಉಡುಪುಗಳು ಒದಗಿಸುವ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಇದರ ಕೆಲವು ಪುರಾವೆಗಳನ್ನು ಮೊಹೆಂಜೊದಾರೊದಲ್ಲಿ ಕಾಣಸಿಗುತ್ತವೆ. ಅದು ಆ ದಿನಗಳಲ್ಲಿ ಹತ್ತಿ ಜವಳಿ ಉದ್ಯಮದ ಅಸ್ತಿತ್ವವನ್ನು ತೋರಿಸುತ್ತದೆ. 1947 ರಲ್ಲಿ ಭಾರತ ಸ್ವತಂತ್ರವಾದಾಗ, ವಿವಿಧ ಯೋಜನೆಗಳು ಮತ್ತು ನೀತಿಗಳ ಮೂಲಕ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉನ್ನತಿಗಾಗಿ ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದು ನಂತರದ ವರ್ಷಗಳಲ್ಲಿ ಈ ವಲಯವು ಬೆಳೆಯಲು ಸಹಾಯ ಮಾಡಿತು. ಆಗಸ್ಟ್ 7, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು. 1905 ರಲ್ಲಿ ಗಮನಾರ್ಹವಾದ ಸ್ವದೇಶಿ ಚಳವಳಿಯನ್ನು ಅದೇ ದಿನಾಂಕದಂದು ಪ್ರಾರಂಭಿಸಿದ ಕಾರಣ ಈ ದಿನಾಂಕವು ಭಾರತೀಯ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ.

ಕೈಮಗ್ಗ ಉದ್ಯಮದ ಮಹತ್ವ:

ದೇಶದ ಆರ್ಥಿಕತೆಯಲ್ಲಿ ಕೈಮಗ್ಗ ಕ್ಷೇತ್ರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನೇಯ್ಗೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ 65 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗವನ್ನು ಒದಗಿಸುವ ದೊಡ್ಡ ಆರ್ಥಿಕ ಚಟುವಟಿಕೆಗಳಲ್ಲಿ ಇದು ಒಂದು.

ಕೈಮಗ್ಗಗಳು ಐತಿಹಾಸಿಕ ಯುಗದಿಂದಲೇ ಭಾರತಕ್ಕೆ ತಿಳಿದಿವೆ. ಬಟ್ಟೆಗಳ ಬಳಕೆ, ಡಿಸೈನರ್ ಕಲಾಕೃತಿಗಳನ್ನು ತಯಾರಿಸಲು ರಚಿಸಲಾದ ತಂತ್ರಗಳು ಮತ್ತು ಅವುಗಳ ಮೂಲಕ ಜನಾಂಗೀಯತೆಯನ್ನು ವ್ಯಕ್ತಪಡಿಸುವುದು ಭಾರತದ ನೆಲೆಯ ಅವಿಭಾಜ್ಯ ಅಂಗವಾಗಿದೆ.

ಕೈಮಗ್ಗ ಉದ್ಯಮವು ಪೂರ್ವ ಕೈಗಾರಿಕಾ ಉತ್ಪಾದನೆಯ ಶೇಕಡಾ 14 ಮತ್ತು ಒಟ್ಟು ರಫ್ತು ವ್ಯವಹಾರದ 30 ಪ್ರತಿಶತದಷ್ಟಿದೆ.

ಈ ವಲಯವು ದೇಶದ ಬಟ್ಟೆ ಉತ್ಪಾದನೆಯ ಸುಮಾರು ಶೇ15 ರಷ್ಟು ಕೊಡುಗೆ ನೀಡುತ್ತದೆ ಮತ್ತು ದೇಶದ ರಫ್ತು ಗಳಿಕೆಗೆ ಸಹಕಾರಿಯಾಗಿದೆ. ವಿಶ್ವದಲ್ಲೇ ಕೈಯಿಂದ ನೇಯ್ದ ಬಟ್ಟೆಯ ಶೇ 95 ರಷ್ಟು ಭಾಗ ಭಾರತದ್ದಾಗಿದೆ.

2017-18ರಲ್ಲಿ ಖಾದಿ ಉದ್ಯಮವು 7,990 ದಶಲಕ್ಷ ಚದರ ಮೀಟರ್​ನಷ್ಟು ಉತ್ಪಾದನೆಯನ್ನ ದಾಖಲಿಸಿದೆ. 2017-18ರಲ್ಲಿ ಕೈಮಗ್ಗ ವಸ್ತುಗಳ ರಫ್ತು 2280.19 ಕೋಟಿ ರೂಪಾಯಿ ಮತ್ತು 2018-19ರಲ್ಲಿ ನವೆಂಬರ್ ವರೆಗೆ 1554.48 ಕೋಟಿ ರೂಪಾಯಿಯಷ್ಟಿದೆ.

ಸ್ವತಂತ್ರ ವಿದ್ಯುತ್ ಮಗ್ಗಗಳು, ಆಧುನಿಕ ಜವಳಿ ಗಿರಣಿಗಳು, ಕೈಮಗ್ಗ ಮತ್ತು ಗಾರ್ಮೆಂಟ್​ ಗಳಂತಹ ಪ್ರಮುಖ ವಿಭಾಗಗಳನ್ನು ಹೊಂದಿರುವ ಕೈಮಗ್ಗ ಉದ್ಯಮ ಭಾರತದ ಎರಡನೇ ಅತಿದೊಡ್ಡ ಉದ್ಯಮವಾಗಿದೆ. ಹೀಗಾಗಿ ಕೈಮಗ್ಗಗ ವಿದೇಶಿ ಮಾರುಕಟ್ಟೆಗಳಲ್ಲಿಯೂ ಜನಪ್ರಿಯಗೊಂಡಿದ್ದು ಅದರ ಬೇಡಿಕೆ ಹೆಚ್ಚಿಸಿದೆ.

ಭಾರತದಲ್ಲಿ ಕೈಮಗ್ಗ ಉದ್ಯಮವು ದೇಶದ ಲಕ್ಷಾಂತರ ಜನರಿಗೆ ಜೀವನೋಪಾಯದ ಹಳೆಯ ಮೂಲವಾಗಿದೆ. ಕೈಮಗ್ಗ ಜವಳಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಭಾರತೀಯ ಕೈಮಗ್ಗಗಳಲ್ಲಿ ಇರುವ ಕಲೆ ಮತ್ತು ಕರಕುಶಲತೆಯ ಅಂಶವು ಮಾರುಕಟ್ಟೆಯ ದೇಶೀಯ ಮತ್ತು ಜಾಗತಿಕ ಮೇಲ್ಭಾಗದ ವಿಭಾಗಗಳಿಗೆ ಸಂಭಾವ್ಯ ವಲಯವಾಗಿದೆ.

ನಗರ ಕೈಮಗ್ಗ ಕಾರ್ಮಿಕರ ಸಂಖ್ಯೆಯು ತಮಿಳುನಾಡಿನಲ್ಲಿ 21.65 ರಷ್ಟಿದ್ದು ಬಹುಪಾಲಾಗಿದೆ. ಇನ್ನೂ ಪಶ್ಚಿಮ ಬಂಗಾಳದಲ್ಲಿ ಶೇ19.9, ಆಂಧ್ರಪ್ರದೇಶದಲ್ಲಿ ಶೇ19, ಉತ್ತರ ಪ್ರದೇಶದಲ್ಲಿ ಶೇ 16.6 ಮತ್ತು ಮಣಿಪುರದಲ್ಲಿ ಶೇ 8.2 ರಷ್ಟಿದೆ.

ಭಾರತದಲ್ಲಿ ಕೈಮಗ್ಗ ಉತ್ಪನ್ನಗಳು:

ಸೀರೆಗಳು, ಸೂಟುಗಳು, ಕುರ್ತಗಳು, ಶಾಲುಗಳು, ಸ್ಕರ್ಟ್‌ಗಳು, ಲೆಹಂಗಚೋಲಿ, ಧೋಟಿಗಳು, ಶೆರ್ವಾನಿಗಳು, ಕುರ್ತಾ ಪೈಜಾಮಾ, ಜಾಕೆಟ್‌ಗಳು, ಟೋಪಿಗಳು, ಚಪ್ಪಲಿಗಳು, ಬೆಡ್ ಲಿನಿನ್, ಟೇಬಲ್ ಲಿನಿನ್, ಕುಶನ್ ಕವರ್, ಪರದೆ, ಚೀಲಗಳು ಮತ್ತು ಪರ್ಸ್​ಗಳು, ಕಂಬಳಿಗಳು, ಮ್ಯಾಟ್‌ಗಳು ಇತ್ಯಾದಿ.

ಕೈಮಗ್ಗ ಉದ್ಯಮಕ್ಕಾಗಿ ಸರ್ಕಾರದ ಯೋಜನೆಗಳು:

ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ

ಸಮಗ್ರ ಕೈಮಗ್ಗ ಅಭಿವೃದ್ಧಿ ಯೋಜನೆ

ನೂಲು ಸರಬರಾಜು ಯೋಜನೆ

ಈಶಾನ್ಯ ಪ್ರದೇಶ ಜವಳಿ ಪ್ರಚಾರ ಯೋಜನೆ

ಕೈಮಗ್ಗ ನೇಕಾರರ ಸಮಗ್ರ ಕಲ್ಯಾಣ ಯೋಜನೆ

ಕೈಮಗ್ಗ ಉದ್ಯಮದ ಮೇಲೆ ಕೋವಿಡ್ -19 ಪರಿಣಾಮ:

ಕೋವಿಡ್-19 ನಿಂದ ಉಂಟಾದ ಬಿಕ್ಕಟ್ಟು ಪ್ರಪಂಚದಾದ್ಯಂತದ ವ್ಯವಹಾರಗಳಿಗೆ ಅಡ್ಡಿ ಉಂಟುಮಾಡಿದೆ. ಇನ್ನೂ ಭಾರತೀಯ ಆರ್ಥಿಕತೆಯೂ ಈ ಸಾಂಕ್ರಾಮಿಕ ರೋಗದಿಂದ ಮುಕ್ತವಾಗಿಲ್ಲ. ಕೊರೊನಾ ಹಾವಳಿ ಕೈಮಗ್ಗ ಕ್ಷೇತ್ರದ ಆರ್ಥಿಕತೆಯ ಮೇಲೂ ಎಲ್ಲ ಕ್ಷೇತ್ರಗಳಂತೆ ತೀವ್ರವಾಗಿ ಪರಿಣಾಮ ಬೀರಿದೆ. ಎಷ್ಟೋ ಕೈಮಗ್ಗದ ಸಾಂಪ್ರದಾಯಿಕ ಮತ್ತು ಸಮಕಾಲೀನ ಮಾರುಕಟ್ಟೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ.

ಕೈಮಗ್ಗ ಉದ್ಯಮದ ಪುನರುಜ್ಜೀವನ:

ಸ್ಮೃತಿ ಇರಾನಿ- ಜವಳಿ ಸಚಿವೆ ಸ್ಮೃತಿ ಇರಾನಿ ಅವರು ಆಗಸ್ಟ್ 1, 2017 ರಂದು ಭಾರತೀಯ ಕೈಮಗ್ಗಗಳನ್ನು ಬೆಂಬಲಿಸುವ ಚಿತ್ರವನ್ನು ಟ್ವೀ ಟ್ ಮಾಡಿ ಕೈಮಗ್ಗ ಹತ್ತಿ ಉಡುಪುಗಳನ್ನು ಉತ್ತೇಜಿಸುವ ರಾಷ್ಟ್ರೀಯ ಅಭಿಯಾನವನ್ನು ಸಾಂಕೇತಿಕವಾಗಿ ಶುರು ಮಾಡಿದರು. ಸ್ಮೃತಿ ಇರಾನಿ ಕೂಡ ಬಿಹಾರದಿಂದ ಕೈಮಗ್ಗದ ಹತ್ತಿ ಸೀರೆ ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿ ಜನರಿಗೂ ತಾವು ಕೈಮಗ್ಗ ಬಟ್ಟೆ ಧರಿಸಿ ಫೋಟೊವನ್ನು ಹಂಚಿಕೊಳ್ಳಲು ಕೇಳಿಕೊಂಡಿದ್ದರು. ಈ ಕಾರ್ಯಾಚರಣೆಯ ಹಿಂದಿನ ಆಲೋಚನೆಯೆಂದರೆ ಹೀಗೆ ತಮ್ಮ ಉಡುಪಿನ ಲುಕ್​ ಹಂಚಿಕೊಳ್ಳಲು ಜನ ಕೈಮಗ್ಗದ ಬಟ್ಟೆ ಖರೀದಿಸುವುದರಿಂದ ದೇಶಾದ್ಯಂತ ಹರಡಿರುವ 43 ಲಕ್ಷ ಭಾರತೀಯ ನೇಕಾರರು ಮತ್ತು ಅವರ ಕುಟುಂಬಗಳಿಗೆ ಬೆಂಬಲ ಸಿಗಬಹುದು ಎಂಬುದು ಈ ಅಭಿಯಾನದ ಉದ್ದೇಶ.

ಭಾರತೀಯ ಕೈಮಗ್ಗಗಳನ್ನು ಅನೇಕ ಪ್ರಸಿದ್ಧ ವ್ಯಕ್ತಿಗಳು ಬೆಂಬಲಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೈಮಗ್ಗ ಹತ್ತಿ ಸೀರೆಗಳನ್ನು ಧರಿಸಿ ಅನುಮೋದಿಸುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚುತ್ತಿದೆ. ಕೈಮಗ್ಗವನ್ನು ಉತ್ತೇಜಿಸುವ ನಟಿಯರು ಇವರು.

ವಿದ್ಯಾ ಬಾಲನ್

ನೀನಾ ಗುಪ್ತಾ

ಕೊಂಕಣ ಸೇನ್

ಅರುಂಧತಿ ರಾಯ್

ಪ್ರಿಯಾಂಕಾ ಚೋಪ್ರಾ

ಶಬಾನಾ ಅಜ್ಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.