ಹೈದರಾಬಾದ್: ಪ್ರತಿ ವರ್ಷ ಡಿಸೆಂಬರ್ 24ನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ರಾಹಕ ಚಳವಳಿಯ ಪ್ರಾಮುಖ್ಯತೆ ಮತ್ತು ಪ್ರತಿಯೊಬ್ಬ ಗ್ರಾಹಕರಲ್ಲಿ ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವುದು ಈ ದಿನದ ವಿಶೇಷತೆಯಾಗಿದೆ.
ಇತಿಹಾಸ ಮತ್ತು ಮಹತ್ವ:
ಈ ದಿನದಂದು ಗ್ರಾಹಕ ಸಂರಕ್ಷಣಾ ಕಾಯ್ದೆ, 1986ರ ರಾಷ್ಟ್ರಪತಿ ಒಪ್ಪಿಗೆಯನ್ನು ಪಡೆದು ಜಾರಿಗೆ ಬಂದಿತು.
ದೋಷಯುಕ್ತ ಸರಕುಗಳು, ಸೇವೆಗಳ ಕೊರತೆ ಮತ್ತು ಅನ್ಯಾಯದ ವ್ಯಾಪಾರದಂತಹ ವಿವಿಧ ರೀತಿಯ ಶೋಷಣೆಯ ವಿರುದ್ಧ ಗ್ರಾಹಕರಿಗೆ ಪರಿಣಾಮಕಾರಿ ಸುರಕ್ಷತೆಗಳನ್ನು ಒದಗಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ.
ಸಮಯೋಚಿತ ಮತ್ತು ಪರಿಣಾಮಕಾರಿ ಆಡಳಿತ ಮತ್ತು ಗ್ರಾಹಕರ ವಿವಾದದ ಇತ್ಯರ್ಥಕ್ಕೆ ಅಧಿಕಾರಿಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಗ್ರಾಹಕ ಸಂರಕ್ಷಣಾ ಮಸೂದೆ, 2019ಕ್ಕೆ ಸಂಸತ್ತು ಅನುಮತಿ ನೀಡಿದೆ.
ರಾಷ್ಟ್ರಪತಿ ಒಪ್ಪಿಗೆಯನ್ನು ಪಡೆದ ನಂತರ ಇದು ಗ್ರಾಹಕರ ಹಕ್ಕುಗಳನ್ನು ಉತ್ತೇಜಿಸಲು, ರಕ್ಷಿಸಲು ಮತ್ತು ಜಾರಿಗೊಳಿಸಲು ಕಾರ್ಯ ನಿರ್ವಹಿಸುತ್ತಿದೆ.
ಈ ವರ್ಷ ರಾಷ್ಟ್ರೀಯ ಗ್ರಾಹಕ ದಿನವನ್ನು "ಸುಸ್ಥಿರ ಗ್ರಾಹಕ" ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆ, 2019:
ಗ್ರಾಹಕ ಸಂರಕ್ಷಣಾ ಕಾಯ್ದೆ 1986 | ನಿಬಂಧನೆಗಳು | ಗ್ರಾಹಕ ಸಂರಕ್ಷಣಾ ಕಾಯ್ದೆ 2019 |
ಪ್ರತ್ಯೇಕ ನಿಯಂತ್ರಕವಿಲ್ಲ | ನಿಯಂತ್ರಕ | ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ರಚನೆಯಾಗಲಿದೆ |
ಮಾರಾಟಗಾರರ (ಪ್ರತಿವಾದಿ) ಕಚೇರಿ ಇರುವ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು | ಗ್ರಾಹಕ ನ್ಯಾಯಾಲಯ | ದೂರುದಾರನು ವಾಸಿಸುವ ಅಥವಾ ಕೆಲಸ ಮಾಡುವ ಪ್ರದೇಶದ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು |
ಗ್ರಾಹಕರು ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಬಹುದು ಆದರೆ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲ | ಉತ್ಪನ್ನ ಹೊಣೆಗಾರಿಕೆ | ಉತ್ಪನ್ನ ಅಥವಾ ಸೇವೆಯಿಂದ ಉಂಟಾಗುವ ಹಾನಿಗೆ ಗ್ರಾಹಕರು ಪರಿಹಾರವನ್ನು ಪಡೆಯಬಹುದು |
ಜಿಲ್ಲೆ: 20 ಲಕ್ಷ ರೂ. ರಾಜ್ಯ: 20 ಲಕ್ಷದಿಂದ 1 ಕೋಟಿ ರೂ. ರಾಷ್ಟ್ರೀಯ: 1 ಕೋಟಿ ರೂ.ಗಿಂತ ಅಧಿಕ | ಹಣದ ವ್ಯಾಪ್ತಿ | ಜಿಲ್ಲೆ: 1 ಕೋಟಿ ರೂ. ರಾಜ್ಯ: 1 ಕೋಟಿಯಿಂದ 10 ಕೋಟಿ ರೂ. ರಾಷ್ಟ್ರೀಯ: 10 ಕೋಟಿ ರೂ.ಗಿಂತ ಅಧಿಕ |
ಯಾವುದೇ ಅವಕಾಶವಿಲ್ಲ | ಇ-ಕಾಮರ್ಸ್ | ನೇರ ಮಾರಾಟದ ಎಲ್ಲ ನಿಯಮಗಳನ್ನು ಇ-ಕಾಮರ್ಸ್‌ಗೆ ವಿಸ್ತರಿಸಲಾಗಿದೆ |
ಯಾವುದೇ ಕಾನೂನು ಅವಕಾಶವಿಲ್ಲ | ಮಧ್ಯಸ್ಥಿಕೆ ಸೆಲ್ | ನ್ಯಾಯಾಲಯವು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥವನ್ನು ಉಲ್ಲೇಖಿಸಬಹುದು |
ಗ್ರಾಹಕ ಸಂರಕ್ಷಣಾ ಕಾಯ್ದೆ, 1986ರ ಕುರಿತು:
ಗ್ರಾಹಕ ಸಂರಕ್ಷಣಾ ಕಾನೂನು 1986 ಪ್ರಾರಂಭವಾದ ಬಳಿಕ ಸಲ್ಲಿಸಿದ / ವಿಲೇವಾರಿ ಮಾಡಿದ ಗ್ರಾಹಕರ ದೂರುಗಳ ಒಟ್ಟು ಸಂಖ್ಯೆ | |||||
ಕ್ರ.ಸಂ. | ಏಜೆನ್ಸಿಯ ಹೆಸರು | ಆರಂಭದಿಂದಲೂ ದಾಖಲಾದ ಪ್ರಕರಣಗಳು | ಆರಂಭದಿಂದಲೂ ವಿಲೇವಾರಿ ಮಾಡಿದ ಪ್ರಕರಣಗಳು | ಬಾಕಿ ಉಳಿದಿರುವ ಪ್ರಕರಣಗಳು | ಒಟ್ಟು ವಿಲೇವಾರಿ (%) |
1 | ರಾಷ್ಟ್ರೀಯ ಆಯೋಗ | 132596 | 111597 | 20999 | 84.16% |
2 | ರಾಜ್ಯ ಆಯೋಗ | 943620 | 818719 | 124901 | 86.76% |
3 | ಜಿಲ್ಲಾ ಆಯೋಗ | 4301258 | 3959149 | 342109 | 92.05% |
Total | 5377474 | 4889465 | 488009 | 90.92% |
ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಜಾರಿಯನ್ನು ದೇಶದ ಗ್ರಾಹಕ ಹಕ್ಕುಗಳ ಆಂದೋಲನದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗಿತ್ತು. ಈ ಕಾಯ್ದೆಯು ಗ್ರಾಹಕರ ಹಿತಾಸಕ್ತಿಗೆ ಉತ್ತಮ ರಕ್ಷಣೆಗಾಗಿ ಒದಗಿಸುತ್ತದೆ ಮತ್ತು ಆ ಉದ್ದೇಶಕ್ಕಾಗಿ ಗ್ರಾಹಕರ ವಿವಾದಗಳನ್ನು ಬಗೆಹರಿಸಲು ಗ್ರಾಹಕ ಮಂಡಳಿಗಳು ಮತ್ತು ಇತರ ಅಧಿಕಾರಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
ಈ ಕಾಯ್ದೆಯಲ್ಲಿ ಒಳಗೊಂಡಿರುವ ಹಕ್ಕುಗಳು ಭಾರತದ ಸಂವಿಧಾನದ 14ರಿಂದ 19ನೇ ವಿಧಿಯಲ್ಲಿ ಪ್ರತಿಪಾದಿಸಲಾದ ಹಕ್ಕುಗಳನ್ನು ಆಧರಿಸಿವೆ. ನಮ್ಮ ದೇಶದ ಆಡಳಿತ ಪ್ರಕ್ರಿಯೆಗಳನ್ನು ಸಾಮಾನ್ಯ ಜನರಿಗೆ ತೆರೆದಿಟ್ಟಿರುವ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಗ್ರಾಹಕರ ರಕ್ಷಣೆಗೆ ಪರಿಣಾಮ ಬೀರುತ್ತದೆ.