ETV Bharat / bharat

ಕೃಷಿ ಉನ್ನತೀಕರಣಕ್ಕೆ ಸಹಾಯ ಮಾಡಿ: ಸಂಶೋಧಕರು,ವಿಜ್ಞಾನಿಗಳಿಗೆ ಉಪರಾಷ್ಟ್ರಪತಿ ಮನವಿ - ಸಂಶೋಧಕರು ವಿಜ್ಞಾನಿಗಳಿಗೆ ಉರಾಷ್ಟ್ರಪತಿ ಮನವಿ

ಭಾರತಕ್ಕೆ ಆಹಾರ ಭದ್ರತೆ ಇರುವುದು ಒಳ್ಳೆಯ ವಿಷಯ. ಆದರೆ, ಇಡೀ ಜಗತ್ತಿಗೆ ಆಹಾರ ಬೆಳೆಯುವ ಸಾಮರ್ಥ್ಯ ದೇಶಕ್ಕಿದೆ. ನಾವು ಅದರತ್ತ ಕೆಲಸ ಮಾಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

Naidu urges researchers
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
author img

By

Published : Aug 19, 2020, 10:37 AM IST

ನವದೆಹಲಿ: ಕೃಷಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆವಿಷ್ಕಾರಗಳನ್ನು ಮಾಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.

ನವೀನ ಸಾಧನೆಗಳ ಕುರಿತಾದ ಸಂಸ್ಥೆಗಳ ಅಟಲ್ ರ‍್ಯಾಂಕಿಂಗ್ (ಎಆರ್​ಐಎ) 2020 ಅನ್ನು ಪ್ರಕಟಿಸಿದ ಅವರು, ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸೃಷ್ಟಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಪೂರೈಸಲು ರೈತರಿಗೆ ವಿವಿಧ ವಿಷಯಗಳ ಬಗ್ಗೆ ಸಮಯೋಚಿತ ಮಾಹಿತಿ ಒದಗಿಸುವುದು, ಹೊಸಬರು ಮತ್ತು ಸಂಶೋಧಕರ ಕೇಂದ್ರ ಬಿಂದುವಾಗಿರಬೇಕು ಎಂದಿದ್ದಾರೆ.

ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಮಧ್ಯವರ್ತಿಗಳಿಂದ ರೈತರ ಶೋಷಣೆ ತಡೆಗಟ್ಟುವ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಖಾತರಿಪಡಿಸುವ ಅಗತ್ಯವನ್ನು ವೆಂಕಯ್ಯ ನಾಯ್ಡು ಒತ್ತಿ ಹೇಳಿದರು. ರೈತರಿಗೆ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ತರಲು ಎಐಸಿಟಿಇ, ಐಸಿಎಆರ್, ಎನ್‌ಐಆರ್‌ಡಿ ಮತ್ತು ಕೃಷಿ ವಿಶ್ವವಿದ್ಯಾಲಯಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದಿದ್ದಾರೆ.

ಉತ್ತಮ ಆದಾಯವಿಲ್ಲದ ಕಾರಣ ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿಯನ್ನು ರೈತರು ತೊರೆಯುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಳವಳ ವ್ಯಕ್ತಪಡಿಸಿದರು. ರೈತರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಅವರು, ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಬೆಂಬಲಿಸುವಲ್ಲಿ ಕೃಷಿ ಕ್ಷೇತ್ರವು ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು.

ಭಾರತಕ್ಕೆ ಆಹಾರ ಭದ್ರತೆ ಇರುವುದು ಒಳ್ಳೆಯ ವಿಷಯ ಆದರೆ, ಇಡೀ ಜಗತ್ತಿಗೆ ಆಹಾರವನ್ನು ಬೆಳೆಯುವ ಸಾಮರ್ಥ್ಯ ದೇಶಕ್ಕಿದೆ. ನಾವು ಅದರತ್ತ ಕೆಲಸ ಮಾಡಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.