ರಾಯ್ಪುರ/ಛತ್ತೀಸ್ಗಢ: ಮಾಜಿ ಸಚಿವ ಡಿ.ಪಿ.ಧೃತ್‌ಲಹರೆ ಅವರ ಸೊಸೆ ಮತ್ತು ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಮನೆಯ ಒಂದೇ ಕೋಣೆಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇನ್ನು ಘಟನೆ ನಡೆದ ಸಮಯದಲ್ಲಿ ಮಾಜಿ ಸಚಿವ ಹಾಗೂ ಅವರ ಪುತ್ರ ಮನೆಯಲ್ಲಿರಲಿಲ್ಲ. ಯಾವುದೋ ಗ್ರಾಮಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಸಚಿವರ ಮಗನ ಹೆಂಡತಿ ಹಾಗೂ ಅವರ 9 ವರ್ಷದ ಮೊಮ್ಮಗಳನ್ನು ಕತ್ತು ಹಿಸುಕಿ ಕೊಂದು ಶವಗಳನ್ನು ದಿವಾನ್ ಮೇಲೆ ಹಾಕಿ ಹೋಗಿದ್ದಾರೆ. ಇನ್ನು ಘಟನೆ ಸಂಬಂಧ ಮೃತಳ ಪತಿ ತರುಣ್ ಧೃತ್‌ಲಹರೆ ಹಾಗೂ ಇಬ್ಬರು ಯುವಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.