Full List of RCB Players: 2025ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಆರ್‌ಸಿಬಿ ತನ್ನ ತಂಡವನ್ನು ಪ್ರಕಟಿಸಿದೆ. ಈ ಬಾರಿ ಉಳಿಸಿಕೊಂಡಿರುವ ಮತ್ತು ಕೈಬಿಟ್ಟಿರುವ ಆಟಗಾರರು ಇದರಲ್ಲಿದ್ದಾರೆ. ಪ್ರಸಕ್ತ ಸಾಲಿನ ಹರಾಜಿಗೆ 83 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಆಗಮಿಸಿದ್ದ, ಆರ್‌ಸಿಬಿ ಅನೇಕ ಉತ್ತಮ ಆಟಗಾರರನ್ನು ಪಡೆದಿದೆ.
ಐಪಿಎಲ್ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನ.24 ಮತ್ತು 25ರ ಎರಡು ದಿನಗಳ ಕಾಲ ನಡೆಯಿತು. ಮೆಗಾ ಹರಾಜು ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹರಾಜಿನಲ್ಲಿ ಹಿರಿಯ ಮತ್ತು ಪ್ರತಿಭಾವಂತ ಆಟಗಾರರ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ ಮೆಗಾ ಹರಾಜಿನಲ್ಲಿ ಎಲ್ಲರ ಕಣ್ಣುಗಳು ಜನಪ್ರಿಯ ಐಪಿಎಲ್ ತಂಡ ಆರ್‌ಸಿಬಿ ಮೇಲಿತ್ತು.
ಹರಾಜಿಗೆ ಮೊದಲು ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಸೇರಿದ್ದು ಅವರನ್ನು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ 20 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದರು. ಮುಂದಿನ ಸೀಸನ್‌ನಿಂದ ಕೊಹ್ಲಿ ಮತ್ತೆ ತಂಡದ ಕ್ಯಾಪ್ಟನ್ ಆಗಬಹುದು ಎಂಬ ವರದಿಗಳಿವೆ. ಇನ್ನುಳಿದಂತೆ, ರಜತ್ ಪಾಟಿದಾರ್ ಅವರನ್ನು 11 ಕೋಟಿ ರೂ. ಮತ್ತು ಯಶ್ ದಯಾಳ್ ಅವರನ್ನು 4 ಕೋಟಿ ರೂ.ಗೆ ಆರ್‌ಸಿಬಿ ಉಳಿಸಿಕೊಂಡಿದೆ.
Experience, Balance and Power, the ultimate base,
— Royal Challengers Bengaluru (@RCBTweets) November 25, 2024
Our Class of ‘25 is ready to embrace! 👊#PlayBold #ನಮ್ಮRCB #IPLAuction #BidForBold #IPL2025 pic.twitter.com/4M7Hnjf1Di
ಮೆಗಾ ಹರಾಜಿನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಖ್ ದಾರ್ ಮತ್ತು ಸುಯ್ಯಾಶ್ ಶರ್ಮಾ ಅವರನ್ನು ಆರ್‌ಸಿಬಿ ಖರೀದಿಸಿದೆ. 8 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 19 ಆಟಗಾರರು ಇದರಲ್ಲಿದ್ದಾರೆ. ಈಗ ತಂಡದಲ್ಲಿ ಒಟ್ಟು 25 ಆಟಗಾರರಿದ್ದು, 22 ಆಟಗಾರರ ಪಟ್ಟಿ ಇಂತಿದೆ.
ಕ್ರಮ ಸಂಖ್ಯೆ | ಆಟಗಾರರು | ಖರೀದಿಸಿದ ಮೌಲ್ಯ(ರೂಪಾಯಿಗಳಲ್ಲಿ) |
1 | ವಿರಾಟ್ ಕೊಹ್ಲಿ | 21 ಕೋಟಿ |
2 | ರಜತ್ ಪಾಟಿದಾರ್ | 11 ಕೋಟಿ |
3 | ಯಶ್ ದಯಾಳ್ | 5 ಕೋಟಿ |
4 | ಲಿಯಾಮ್ ಲಿವಿಂಗ್ಸ್ಟೋನ್ | 8.75 ಕೋಟಿ |
5 | ಫಿಲ್ ಸಾಲ್ಟ್ | 11.50 ಕೋಟಿ |
6 | ಜಿತೇಶ್ ಶರ್ಮಾ | 11.00 ಕೋಟಿ |
7 | ಜೋಶ್ ಹ್ಯಾಜಲ್‌ವುಡ್ | 12.50 ಕೋಟಿ |
8 | ರಸಿಖ್ ದಾರ್ | 6 ಕೋಟಿ |
9 | ಸುಯ್ಯಾಶ್ ಶರ್ಮಾ | 2.60 ಕೋಟಿ |
10 | ಕೃನಾಲ್ ಪಾಂಡ್ಯ | 6.75 ಕೋಟಿ |
11 | ಭುವನೇಶ್ವರ್ ಕುಮಾರ್ | 10.75 ಕೋಟಿ |
12 | ಸ್ವಪ್ನಿಲ್ ಸಿಂಗ್ | 50 ಲಕ್ಷ |
13 | ಟಿಮ್ ಡೇವಿಡ್ | 3 ಕೋಟಿ |
14 | ರೊಮಾರಿಯೋ ಶೆಫರ್ಡ್ | 1.5 ಕೋಟಿ |
15 | ನುವಾನ್ ತುಷಾರ್ | 1.4 ಕೋಟಿ |
16 | ಜೇಕಬ್ ಬೆತೆಲ್ | 2.6 ಕೋಟಿ |
17 | ಮನೋಜ್ ಭಾಂಡಗೆ | 30 ಲಕ್ಷ |
18 | ದೇವದತ್ ಪಡಿಕ್ಕಲ್ | 2 ಕೋಟಿ |
19 | ಸ್ವಸ್ತಿಕ್ ಚಿಕಾರ | 30 ಲಕ್ಷ |
20 | ಲುಂಗಿ ಎನ್ಗಿಡಿ | 1 ಕೋಟಿ |
21 | ಅಭಿನಂದನ್ ಸಿಂಗ್ | 30 ಲಕ್ಷ |
22 | ಮೋಹಿತ್ ರಾಠಿ | 30 ಲಕ್ಷ |
ಆರ್‌ಸಿಬಿ ಕೈಬಿಟ್ಟ ಆಟಗಾರರು: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ರಾಜನ್ ಕುಮಾರ್ ಶರ್ಮಾ, ಹಿಮಾನ್ಸ್ ಶರ್ಮಾ ಗ್ರೀನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್ ಮತ್ತು ಸ್ವಪ್ನಿಲ್ ಸಿಂಗ್.
ಇದನ್ನೂ ಓದಿ: ಐಪಿಎಲ್ ಹರಾಜು: 13ರ ಬಾಲಕ ವೈಭವ್ ಸೂರ್ಯವಂಶಿಗೆ ₹1.10 ಕೋಟಿ ಕೊಟ್ಟು ಖರೀದಿಸಿದ ರಾಜಸ್ಥಾನ್ ರಾಯಲ್ಸ್!