ETV Bharat / bharat

ಕೇರಳ ಸಿಎಂ ಮಗಳ ಮದುವೆಯಲ್ಲಿ ಕೊಲೆ ಅಪರಾಧಿ.. ಬಿಜೆಪಿ ಆರೋಪ - ಆರ್​ಎಸ್​ಎಸ್​ ಕಾರ್ಯಕರ್ತನ ಹತ್ಯೆಗೈದ ಅಪರಾಧಿ

ಮುಖ್ಯಮಂತ್ರಿಯ ಅಧಿಕೃತ ನಿವಾಸವಾದಲ್ಲಿ ಈ ವಿವಾಹ ನಡೆದಿದ್ದು, 50ಕ್ಕೂ ಕಡಿಮೆ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರುಗಳು ಮಾತ್ರ ಈ ಮದುವೆಯಲ್ಲಿ ಹಾಜರಾಗಿದ್ದಾರೆ. ಈ ಸಮಾರಂಭದಲ್ಲಿ ಹಾಜರಿದ್ದ ವರನ ಕುಟುಂಬ ಸದಸ್ಯರ ಪೈಕಿ ಹಾಶಿಮ್ ಕೂಡ ಓರ್ವನಾಗಿದ್ದಾನೆ.

wedding of Kerala CM's daughter
ಕೇರಳ ಸಿಎಂ ಮಗಳ ಮದುವೆ
author img

By

Published : Jun 16, 2020, 10:20 PM IST

ತಿರುವನಂತಪುರಂ (ಕೇರಳ) : 24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವನನ್ನ ಕೊಂದ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡುವಂತೆ ಬಿಜೆಪಿ ಆಗ್ರಹಿಸಿದೆ.

24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತ ಒಟ್ಟಾಪಿಲಾವ್ ಸುರೇಶ್ ಬಾಬು ಎಂಬಾತನ್ನು ಮುಹಮ್ಮದ್ ಹಾಶಿಮ್ ಕೊಲೆಗೈದಿದ್ದ. ಪೆರೋಲ್​ ಮೇಲೆ ಅಪರಾಧಿ ಹೊರಬಂದು ಸಿಎಂ ಅಧಿಕೃತ ನಿವಾಸದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದಾರೆಯೇ ಎಂದು ಮುಖ್ಯಮಂತ್ರಿ ವಿಜಯನ್ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ಫೇಸ್‌ಬುಕ್ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಸಿವಿಐ(ಎಂ) ಯುವ ಮುಖಂಡ ಮತ್ತು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಪಿ ಎ ಮೊಹಮ್ಮದ್ ರಿಯಾಸ್‌ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ಮಗಳು ವೀಣಾ ಮದುವೆಯಲ್ಲಿ ಕ್ಲಿಕ್ಕಿಸಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ಈ ಫೋಟೋದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೊಳಗಾದ ಹಾಗೂ ಪ್ರಸ್ತುತ ಪೆರೋಲ್​ ಮೇಲೆ ಹೊರ ಬಂದಿರುವ ಮುಹಮ್ಮದ್ ಹಾಶಿಮ್, ನವಜೋಡಿಗಳೊಂದಿಗೆ ನಿಂತಿರುವ ಫೋಟೋ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ.

ಮುಖ್ಯಮಂತ್ರಿಯ ಅಧಿಕೃತ ನಿವಾಸವಾದಲ್ಲಿ ಈ ವಿವಾಹ ನಡೆದಿದ್ದು, 50ಕ್ಕೂ ಕಡಿಮೆ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರುಗಳು ಮಾತ್ರ ಈ ಮದುವೆಯಲ್ಲಿ ಹಾಜರಾಗಿದ್ದಾರೆ. ಈ ಸಮಾರಂಭದಲ್ಲಿ ಹಾಜರಿದ್ದ ವರನ ಕುಟುಂಬ ಸದಸ್ಯರ ಪೈಕಿ ಹಾಶಿಮ್ ಕೂಡ ಓರ್ವನಾಗಿದ್ದಾನೆ. ಈತ ರಿಯಾಸ್​ನ ಆಪ್ತ ಹಾಗೂ ಹತ್ತಿರದ ಸಂಬಂಧಿ ಎನ್ನಲಾಗಿದೆ.

ಸಿಎಂ ಅವರ ಅಧಿಕೃತ ನಿವಾಸದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪೆರೋಲ್​​ ಆಧಾರದ ಮೇಲೆ ಜೈಲಿನಿಂದ ಹೊರಬಂದ ಅಪರಾಧಿ ಹಾಜರಿದ್ದಾರೆಯೇ ಎಂದು ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ. 24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತ ಒಟ್ಟಾಪಿಲಾವ್ ಸುರೇಶ್ ಬಾಬು ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಹಶೀಮ್ ಪ್ರಕರಣವನ್ನು ಈ ಹಿಂದೆ ಖುಲಾಸೆಗೊಳಿಸಿತ್ತು. ಆದರೆ, ಸುಪ್ರೀಂಕೋರ್ಟ್ 2017ರಲ್ಲಿ ಹಶೀಂಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.