ETV Bharat / bharat

ಅಭ್ಯರ್ಥಿ ಮನೆಯಲ್ಲಿ 18 ಮತದಾರರು, ಬಿದ್ದಿರುವುದು ಎರಡೇ ವೋಟ್: ಬಿಹಾರದಲ್ಲಿ ಹೀಗೊಂದು ವಿಚಿತ್ರ!

ಬಿಹಾರದಲ್ಲಿ ಎನ್​ಸಿಪಿ ಪಕ್ಷದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿಯೊಬ್ಬನಿಗೆ ಕೇವಲ ಎರಡು ಮತಗಳು ಬಿದ್ದಿರುವ ವಿಚಿತ್ರ ಘಟನೆ ನಡೆದಿದೆ.

author img

By

Published : Nov 11, 2020, 4:34 PM IST

Bihar Election
Bihar Election

ಮುಂಗೇರ್​(ಬಿಹಾರ): ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಈಗಾಗಲೇ ಬಹಿರಂಗಗೊಂಡಿದ್ದು, ಎಲ್ಲ ಅಭ್ಯರ್ಥಿಗಳ ಹಣೆಬರಹ ಹೊರಬಿದ್ದಿದೆ. ಇದರ ಮಧ್ಯೆ ಕೆಲವೊಂದು ಚಿತ್ರ-ವಿಚಿತ್ರ ಫಲಿತಾಂಶ ಬಹಿರಂಗಗೊಂಡಿವೆ.

ಬಿಹಾರದ ಜಮಾಲ್ಪುರ್​​ ವಿಧಾನಸಭೆ ಕ್ಷೇತ್ರದಲ್ಲಿ ಎನ್​ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇಂದ್ರದೇವ್​ ದಾಸ್​ ಅವರಿಗೆ ಕೇವಲ 2 ವೋಟ್ ಬಿದ್ದಿವೆ. ವಿಶೇಷವೆಂದರೆ ಇವರ ಮನೆಯಲ್ಲಿ 18 ಮತದಾರರಿದ್ದು, ಎಲ್ಲರೂ ಬೂತ್​ ಸಂಖ್ಯೆ 177ರಲ್ಲಿ ಮತದಾನ ಮಾಡಿದ್ದರು. ಆದರೆ, ಮತ ಎಣಿಕೆ ಮಾಡಿದಾಗ ಕೇವಲ 2 ಮತಗಳು ಇವರ ಪರವಾಗಿ ಚಲಾವಣೆಗೊಂಡಿವೆ. ಇವಿಎಂ ಮಷಿನ್​ನಲ್ಲಿ ಆಗಿರುವ ತೊಂದರೆಯಿಂದ ಈ ರೀತಿಯಾಗಿ ಆಗಿದೆಯಾ ಅಥವಾ ಬೇರೆ ಪಕ್ಷಕ್ಕೆ ಅವರು ವೋಟ್ ಹಾಕಿದ್ದಾರಾ ಎಂಬ ಸ್ಪಷ್ಟ ಚಿತ್ರಣ ಗೊತ್ತಾಗಿಲ್ಲ.

ಚುನಾವಣೆಯಲ್ಲಿ ಕಳೆದ ಅನೇಕ ದಿನಗಳಿಂದ ಇತನ ಪರವಾಗಿ ಕುಟುಂಬಸ್ಥರು ಪ್ರಚಾರ ನಡೆಸಿದ್ದರು. ಆದರೆ ಮತದಾನದ ವೇಳೆ ಈ ರೀತಿಯಾಗಿ ಆಗಿರುವುದಕ್ಕೆ ಪ್ರಮುಖ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಇಂದ್ರದೇವ್​ ದಾಸ್ ಹೇಳಿಕೊಂಡಿದ್ದಾರೆ. ಇದರ ಜತೆಗೆ ತಮಗೆ ಆಗಿರುವ ಮೋಸದ ವಿರುದ್ಧ ಅವರು ಕೋರ್ಟ್ ಮೆಟ್ಟಿಲೇರಲು ತಯಾರಿ ನಡೆಸಿರುವುದಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.