ETV Bharat / bharat

ತಾಜ್​ ಹೋಟೆಲ್​ಗೆ ಹುಸಿ ಬಾಂಬ್​ ಕರೆ: ಪೊಲೀಸರಿಂದ ಬಿಗಿ ಭದ್ರತೆ - ಕರಾಚಿ

ಪಾಕಿಸ್ತಾನದಿಂದ ವಿಶ್ವ ವಿಖ್ಯಾತ ತಾಜ್​ ಹೋಟೆಲ್​ಗೆ ಬಾಂಬ್​ ಇಟ್ಟಿರುವುದಾಗಿ ಕರೆ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

hotel taj
ತಾಜ್​ ಹೋಟೆಲ್​
author img

By

Published : Jun 30, 2020, 11:08 AM IST

ಮುಂಬೈ : ವಿಶ್ವವಿಖ್ಯಾತ ತಾಜ್​ ಹೋಟೆಲ್​ಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆಯೊಂದು ಪಾಕಿಸ್ತಾನದ ಕರಾಚಿಯಿಂದ ಬಂದಿದೆ. ಮುಂಬೈ ಪೊಲೀಸರಿಗೆ ಈ ವಿಷಯ ತಿಳಿಯುತ್ತಿದ್ದಂತೆ ತಾಜ್​ ಹೋಟೆಲ್​​ಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿ ಬಾಂಬ್​ ಕರೆ ಎಂದು ಗೊತ್ತಾಗಿದೆ.

ಆದರೂ ತಾಜ್​ ಹೋಟೆಲ್​ನ ಸುತ್ತಮುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದ್ದು, ಹೆಚ್ಚು ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ನೇಪಾಳ ಗಡಿಯ ಮೂಲಕ ಜೈಷ್​ ಎ ಮೊಹಮದ್​ ಹಾಗೂ ತಾಲಿಬಾನ್​ ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎಂದು ಬಿಹಾರ ಸರ್ಕಾರ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

2008ರಲ್ಲಿ ತಾಜ್​ ಹೋಟೆಲ್​ ಮೇಲೆ ಉಗ್ರರು ದಾಳಿ ನಡೆಸಿದ್ದರ ಪರಿಣಾಮವಾಗಿ 166 ಮಂದಿ ಬಲಿಯಾಗಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈಗ ಬಂದಿರುವ ಹುಸಿ ಬಾಂಬ್​ ಕರೆ 2008ರ ಘಟನೆಯ ಹಿನ್ನೆಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.