ಮುಂಬೈ: ಇಲ್ಲಿನ ಶಾಸಕರ ಹಾಸ್ಟೆಲ್ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅಂತೆಯೇ ಮುಂಬೈ ಪೊಲೀಸರು, ಹಾಸ್ಟೆಲ್ನಲ್ಲಿದ್ದವರನ್ನು ತಕ್ಷಣವೇ ಸ್ಥಳಾಂತರಿಸಿದ್ದಾರೆ.
ಕಟ್ಟಡದಲ್ಲಿ ಸುಮಾರು 150 ಜನ ಇದ್ದರು. ಬೆದರಿಕೆ ಕರೆಯ ಬಳಿಕ ಶೋಧ ಕಾರ್ಯ ನಡೆಸಿದೆವೆ. ಆದ್ರೆ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲ, ಬೆದರಿಕೆ ಕರೆ ಬಂದ ನಂಬರ್ ಅನ್ನು ಟ್ರೇಸ್ ಮಾಡುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ಕಟ್ಟಡದ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆಯೊಂದು ಬಂದಿತ್ತು. ಆ ಬಳಿಕ ಕಟ್ಟದಲ್ಲಿದ್ದವರನ್ನು ಸ್ಥಳಾಂತರಿಸಿ, ಫುಲ್ ಚೆಕ್ ಮಾಡಲಾಗಿದ್ದು, ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಹೇಳಿದ್ದಾರೆ.