ETV Bharat / bharat

'UPSC ಪರೀಕ್ಷೆ ಪಾಸ್ ಮಾಡಲು​ 'ಧೋನಿ ಮಂತ್ರ' ಸಹಾಯವಾಯ್ತು' - ಎಂಎಸ್​ ಧೋನಿ ಮಂತ್ರ

ಕಳೆದ ಮಂಗಳವಾರ ಪ್ರಕಟಗೊಂಡ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಹೊತ್ತು ತಂದಿದೆ. ಈಶಾನ್ಯ ರಾಜ್ಯ ಮಣಿಪುರದ ಯುವಕನಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕ್ರಿಕೆಟಿಗ ಎಂ.ಎಸ್.ಧೋನಿ ಸ್ಫೂರ್ತಿಯಾಗಿದ್ದಾರಂತೆ.

MS Dhoni mantra helped Manipur boy
MS Dhoni mantra helped Manipur boy
author img

By

Published : Aug 6, 2020, 4:34 PM IST

ಮಣಿಪುರ: 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 373ನೇ ಸ್ಥಾನ ಪಡೆದ ಮಣಿಪುರದ ಪರಿಕ್ಷಿತ್​​ ಥೌಡಮ್ ಅವರಿಗೆ ಖ್ಯಾತ ಕ್ರಿಕೆಟರ್​ ಧೋನಿ ಮಂತ್ರ ಸಹಾಯವಾಗಿದೆಯಂತೆ.

ಮಾಧ್ಯಮದೊಂದಿಗೆ ಮಾತನಾಡಿದ ಯುಪಿಎಸ್​​ಸಿ ಸಾಧಕ ಪರಿಕ್ಷಿತ್‌ ಥೌಡಮ್‌

ಏನಿದು ಧೋನಿ ಮಂತ್ರ?

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಧೋನಿ, ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿ ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಈ ಸಂದರ್ಭ ನನಗೆ ನಿಯಂತ್ರಿಸಲು ಸಾಧ್ಯವಾಗಿರುವುದನ್ನು ನಾನು ನಿಯಂತ್ರಿಸಿದ್ದೇನೆ. ಅದರಂತೆ ನೀವು ಮಾಡುವ ಕೆಲಸದ ಮೇಲೆ ನಂಬಿಕೆ ಇಡಿ. ನಿಮ್ಮಿಂದ ಯಾವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮಿಂದ ನಿಯಂತ್ರಿಸಲು ಸಾಧ್ಯವಾಗುವುದನ್ನು ಮಾತ್ರ ನಿಯಂತ್ರಿಸಿ. ಬೇರೆ ಯಾವುದೇ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದರ ಜತೆಗೆ ಕಠಿಣ ಪರಿಶ್ರಮ ಮತ್ತು ಸ್ವಯಂ ನಂಬಿಕೆಯಿಂದ ಮುನ್ನೆಡೆಯಿರಿ ಎಂದಿದ್ದರು.

ಕಠಿಣ ಪರಿಶ್ರಮ ಮತ್ತು ನಂಬಿಕೆಯಿಂದ ಯಾವುದೇ ಪರೀಕ್ಷೆಯನ್ನೂ ಸುಲಭವಾಗಿ ಪಾಸ್​ ಮಾಡಬಹುದು. ಗಿದ್ದು, ಧೋನಿ ಅದರಿಂದಲೇ ಯಶಸ್ಸು ಕಂಡಿದ್ದಾರೆ. ಅವರ ಈ ಮಂತ್ರವೇ ನನಗೆ ಸಹಕಾರಿಯಾಗಿದೆ ಎಂದು ಪರಿಕ್ಷಿತ್‌ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.