ಶಿಯೋಪುರ್(ಮಧ್ಯಪ್ರದೇಶ): ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಘಟನೆಯೊಂದರಲ್ಲಿ ಗರ್ಭಿಣಿಯೊಬ್ಬಳು ಬರೋಬ್ಬರಿ ಆರು ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ದಲ್ಲಿ ನಡೆದಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆ ಇಂದು ಬೆಳಗ್ಗೆ ಆರು ಮಕ್ಕಳಿಗೆ ಜನ್ಮ ನೀಡಿದ್ದು, ಅದರಲ್ಲಿ ಎರಡು ಮಕ್ಕಳು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಈ ಜಿಲ್ಲೆಯಲ್ಲಿ ನಡೆದಿರುವ ಮೊದಲ ಘಟನೆ ಇದಾಗಿದ್ದು, ಈ ಹಿಂದೆ ಯಾವುದೇ ಮಹಿಳೆ ಇಷ್ಟೊಂದು ಮಕ್ಕಳಿಗೆ ಜನ್ಮ ನೀಡಿಲ್ಲ ಎಂದು ತಿಳಿದು ಬಂದಿದೆ.
ನಾಲ್ವರು ಮಕ್ಕಳನ್ನ ಐಸಿಯುನಲ್ಲಿಡಲಾಗಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಎರಡು ಮಕ್ಕಳು ಸಾವನ್ನಪ್ಪಿದ್ದು, ಉಳಿದ ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ತಾಯಿಯ ಆರೋಗ್ಯ ಕೂಡ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.