ETV Bharat / bharat

ಶಾಲೆ ಟಾಯ್ಲೆಟ್​​ನಲ್ಲೇ ಗಂಡ - ಹೆಂಡ್ತಿ ಕ್ವಾರಂಟೈನ್​... ತನಿಖೆಗೆ ಆದೇಶ ನೀಡಿದ ಡಿಸಿ!

author img

By

Published : May 4, 2020, 3:57 PM IST

ಮಧ್ಯಪ್ರದೇಶದ ಸರ್ಕಾರಿ ಶಾಲೆಯೊಂದಲ್ಲಿ ದಂಪತಿ ಟಾಯ್ಲೆಟ್​​ನಲ್ಲೇ ಕ್ವಾರಂಟೈನ್​ಗೆ ಒಳಪಟ್ಟಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

MP labourer couple allegedly quarantined in toilet

ಗುನಾ (ಮಧ್ಯಪ್ರದೇಶ): ಕೊರೊನಾ ವೈರಸ್​​ನಿಂದ ಬಳಲುತ್ತಿರುವ ಸೋಂಕಿತರನ್ನ ವಿವಿಧ ಕ್ವಾರಂಟೈನ್​ ಸೆಂಟರ್​​ಗಳಲ್ಲಿಟ್ಟು ನಿಗಾ ವಹಿಸಲಾಗ್ತಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಇದರ ಮಧ್ಯೆ ಶಾಲೆ ಟಾಯ್ಲೆಟ್​​ನಲ್ಲೇ ಗಂಡ-ಹೆಂಡತಿ ಕ್ವಾರಂಟೈನ್​​ನಲ್ಲಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಶಾಲೆ ಟಾಯ್ಲೆಟ್​​ನಲ್ಲೇ ಗಂಡ-ಹೆಂಡ್ತಿ ಕ್ವಾರಂಟೈನ್

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಗಂಡ-ಹೆಂಡತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿರುವ ಕಾರಣ ಅವರನ್ನ ಶಾಲೆಯ ಶೌಚಾಲಯದಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಅಲ್ಲೇ ಕುಳಿತು ಊಟ ಮಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​​​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಶಾಲೆಯ ಮುಖ್ಯ ಬಿಲ್ಡಿಂಗ್​​ನಲ್ಲಿ ಇರಲು ಆದೇಶ ನೀಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಸರ್ಕಾರಿ ಅಧಿಕಾರಿಗಳೇ ಇವರನ್ನ ಶಾಲೆಯ ಶೌಚಾಲಯದಲ್ಲಿ ಕ್ವಾರಂಟೈನ್​ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ತನಿಖೆ ನಡೆಸುತ್ತಿದ್ದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಇವರು ಶೌಚಾಲಯದಲ್ಲಿ ತಮ್ಮ ದಿನನಿತ್ಯದ ಜೀವನ ಕಳೆಯುತ್ತಿರುವ ವಿಡಿಯೋ ಕೂಡ ವೈರಲ್​ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.