ETV Bharat / bharat

ಕೊರೊನಾ ನಡುವೆ ಭೋಪಾಲ್​ನಲ್ಲಿ ತಯಾರಾದ ಇಮ್ಯುನಿಟಿ ಬೂಸ್ಟರ್​ ‘ಆಯುರ್ವಸ್ತ್ರ’..! - ಭೋಪಾಲ್‌ನಲ್ಲಿ ತಯಾರಾಗುವ ವಿಶೇಷ ಆಯುರ್ವಸ್ತ್ರ ಸೀರೆಗಳು

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತಯಾರಾಗುವ ವಿಶೇಷ ಆಯುರ್ವಸ್ತ್ರ ಸೀರೆಗಳನ್ನು, ದೇಶದ 36 ಮೃಗ ನಯನಿ ಎಂಪೋರಿಯಮ್ ಕೇಂದ್ರಗಳಲ್ಲಿ ಮಾರಾಟಕ್ಕೆ ಇಡಲಾಗುತ್ತದೆ..

MP handloom makes immunity booster sari
ಭೋಪಾಲ್‌ನಲ್ಲಿ ತಯಾರಾಗುವ ವಿಶೇಷ ಆಯುರ್ವಸ್ತ್ರ ಸೀರೆಗಳು
author img

By

Published : Dec 4, 2020, 6:13 AM IST

ಭೋಪಾಲ್​(ಮಧ್ಯಪ್ರದೇಶ): ಭೋಪಾಲ್​ ತನ್ನ ಸೌಂದರ್ಯದಿಂದ ಮತ್ತು ನವಾಬರ ಆಳ್ವಿಕೆಯಿಂದ ವಿಶಿಷ್ಟ ಗುರುತು ಹೊಂದಿದೆ. ಇಲ್ಲಿನ ಕೈಮಗ್ಗ ಮತ್ತು ಕರಕುಶಲ ನಿಗಮದಲ್ಲಿ ತಯಾರಿಸಿದ ಉತ್ಪನ್ನಗಳು ಸಹ ವಿಶೇಷವಾಗಿವೆ. ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತಿ ಮುಖ್ಯ. ಹೀಗಿರುವಾಗ ಇಲ್ಲಿನ ಕೈಮಗ್ಗಗಳಲ್ಲಿ ಚರ್ಮದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೀರೆಗಳನ್ನು ತಯಾರಿಸಲಾಗಿದೆ. ಇವುಗಳಿಗೆ ಆಯುರ್ವಸ್ತ್ರ ಎಂದು ಹೆಸರಿಡಲಾಗಿದೆ.

ಭೋಪಾಲ್‌ನ ಜವಳಿ ರಫ್ತು ಕೈಮಗ್ಗ ಮತ್ತು ಕರಕುಶಲ ವಿಭಾಗದ ಅಧಿಕಾರಿಗಳ ಸಲಹೆಯ ಮೇರೆಗೆ ಗಿಡಮೂಲಿಕೆಗಳ ಮಸಾಲೆಗಳನ್ನು ಬಳಸಿ ನೂರಾರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ವಿಧಾನದ ಮೂಲಕ ಈ ಸೀರೆಗಳನ್ನು ತಯಾರಿಸಲಾಗಿದೆ. ನಂತರ ಬಟ್ಟೆಗಳನ್ನು ಉಗಿಯ ಆವಿಯಲ್ಲಿ ಇರಿಸುವ ಮೂಲಕ ಗಂಟೆಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಆಯುರ್ವಸ್ತ್ರವನ್ನು ತಯಾರಿಸಲಾಗುತ್ತದೆ. ಹೀಗೆ ಒಂದು ಸೀರೆಯನ್ನು ತಯಾರಿಸಲು ಸುಮಾರು 5 ರಿಂದ 6 ದಿನಗಳು ಬೇಕಾಗುತ್ತದೆ.

ಭೋಪಾಲ್‌ನಲ್ಲಿ ತಯಾರಾಗುವ ವಿಶೇಷ ಆಯುರ್ವಸ್ತ್ರ ಸೀರೆಗಳು

ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನಲ್ಲಿ ತಯಾರಾದ ಈ ವಿಶೇಷ ಆಯುರ್ವಸ್ತ್ರ ಸೀರೆಗಳನ್ನು ಭೋಪಾಲ್-ಇಂದೋರ್‌ ಹಾಗೂ ದೇಶದ 36 ಮೃಗ ನಯನಿ ಎಂಪೋರಿಯಮ್ ಕೇಂದ್ರಗಳಲ್ಲಿ ಮಾರಾಟಕ್ಕೆ ಇಡಲಾಗುವುದು. ಇವುಗಳ ಮಾರಾಟಕ್ಕೆ ಮಧ್ಯಪ್ರದೇಶದ ಹೊರಗೆ 14 ಕೇಂದ್ರಗಳಿವೆ. ಇವುಗಳಲ್ಲಿ ಗೋವಾ, ಮುಂಬೈ, ನೋಯ್ಡಾ, ನವದೆಹಲಿ, ಅಹಮದಾಬಾದ್, ಕೆವಾಡಿಯಾ, ಗುಜರಾತ್, ಜೈಪುರ, ಕಾಲಿಘಾಟ್, ಕೋಲ್ಕತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ರಾಯ್‌ಪುರ ಸೇರಿವೆ.

ಮಧ್ಯಪ್ರದೇಶ ಕೈಮಗ್ಗ ಮತ್ತು ಕರಕುಶಲ ನಿಗಮ ಹಲವು ಹಂತಗಳ ಮೂಲಕ ಈ ಸೀರೆಗಳನ್ನು ತಯಾರಿ ಮಾಡುತ್ತಿದೆ. ಈ ಇಮ್ಯುನಿಟಿ ಬೂಸ್ಟರ್ ಸೀರೆಗಳನ್ನು ಧರಿಸುವವರ ಚರ್ಮದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ.

ಕೋವಿಡ್​ ಹರಡುವ ಭೀತಿಯಿಂದ ರಕ್ಷಿಸಿಕೊಳ್ಳಲು ಜನ ಈ ಸೀರೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅಲ್ಲದೇ ಭೋಪಾಲ್​ ಕೈಮಗ್ಗ ಮತ್ತು ಕರಕುಶಲ ನಿಗಮದ ಈ ನೂತನ ಸೀರೆಗಳು ನಾರಿಯರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.