ETV Bharat / bharat

ಕೋವಿಡ್​-19.. ಮಧ್ಯಪ್ರದೇಶ ಸರ್ಕಾರದಿಂದ 64 ವಿದೇಶಿಯರ ವಿರುದ್ಧ ಪ್ರಕರಣ ದಾಖಲು..

ಜಮಾತ್​ನ ಎಂಟು ವಿದೇಶಿ ಸದಸ್ಯರು ಮತ್ತು ಇತರರಿಗೆ ಪಾಸಿಟಿವ್​ ಕಂಡು ಬಂದಿದೆ. ಇವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ವರದಿಗಳ ಪ್ರಕಾರ ವಿದೇಶಿಯರು ಗುಣವಾದ ನಂತರ ದಂಡ ಮತ್ತು ಗಡಿಪಾರು ಮಾಡಲಾಗುತ್ತದೆ.

ಮಧ್ಯಪ್ರದೇಶ ಸರ್ಕಾರದಿಂದ 64 ವಿದೇಶಿಯರ ವಿರುದ್ಧ ಪ್ರಕರಣ ದಾಖಲು

author img

By

Published : Apr 12, 2020, 9:57 AM IST

ಭೋಪಾಲ್ : ಕಳೆದ ತಿಂಗಳು ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿ ಈವರೆಗೂ ಮರೆಮಾಚಿಕೊಂಡಿದ್ದ 64 ವಿದೇಶಿಯರು ಹಾಗೂ 10 ಇತರೆ ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ದೆಹಲಿಯ ಜಮಾತ್​ ಸಭೆ ದೇಶದ ತುಂಬೆಲ್ಲಾ ಕೊರೊನಾ ಹರಡಲು ಪ್ರಮುಖ ಕಾರಣವಾಗಿದೆ. ಆದರೂ ಕೂಡ ಈ ಸಭೆಯಲ್ಲಿ ಭಾಗಿಯಾದ ಸದಸ್ಯರನ್ನು ಎಷ್ಟೇ ಕೇಳಿಕೊಂಡರು ಪರೀಕ್ಷೆ ಮಾಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​, ತಬ್ಲಿಘಿಯಲ್ಲಿ ಭಾಗಿಯಾದವರು 24 ಗಂಟೆಯೊಳಗೆ ಕಾಣಿಸಿಕೊಳ್ಳಬೇಕು, ಇಲ್ಲವಾದರೆ ಕ್ರಿಮಿನಲ್​ ಪ್ರಕರಣ ಎದುರಿಸಬೇಕು ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆ ಈಗ ಐದು ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ನಾವು ಈಗಾಗಲೇ 13 ಸ್ಥಳೀಯರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಇವರು ಜಮಾತ್‌ನಲ್ಲಿ ಭಾಗಿಯಾಗಿ ಬಂದು ವಿವಿಧ ಮಸೀದಿಗಳಲ್ಲಿ ತಲೆಮರೆಸಿಕೊಂಡು ಆಶ್ರಯ ಪಡೆದಿದ್ದರು. ಇದರಿಂದ ಸೋಂಕು ಎಲ್ಲಾ ಕಡೆ ಪಸರಿಸುವ ಸಾಧ್ಯತೆ ಹೆಚ್ಚಿತ್ತು. ಇದನ್ನು ನಿಯಂತ್ರಣ ಮಾಡಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ರಜತ್ ಸಕ್ಲೆಚಾ ಮಾಹಿತಿ ನೀಡಿದ್ದಾರೆ. ವೀಸಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾನ್ಮಾರ್, ಇಂಡೋನೇಷ್ಯಾ, ಫ್ರಾನ್ಸ್, ಬೆಲ್ಜಿಯಂ ಮತ್ತು ಕಿರ್ಗಿಸ್ತಾನ್ ಮೂಲದ ವಿದೇಶಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಕ್ಲೆಚಾ ಹೇಳಿದ್ದಾರೆ.

ಜಮಾತ್​ನ ಎಂಟು ವಿದೇಶಿ ಸದಸ್ಯರು ಮತ್ತು ಇತರರಿಗೆ ಪಾಸಿಟಿವ್​ ಕಂಡು ಬಂದಿದೆ. ಇವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು. ವರದಿಗಳ ಪ್ರಕಾರ ವಿದೇಶಿಯರು ಗುಣವಾದ ನಂತರ ದಂಡ ಮತ್ತು ಗಡಿಪಾರು ಮಾಡಲಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರವು ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಭಾರತದಲ್ಲಿ ಅವರ ಪ್ರವೇಶ ನಿಷೇಧಿಸಲು ಮುಂದಾಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.