ETV Bharat / bharat

'ಸೋಂಕಿದ್ದರೂ ತಾಯಂದಿರು ಶಿಶುಗಳಿಗೆ ಎದೆಹಾಲು ಉಣಿಸಿ'

ಪೌಷ್ಠಿಕತೆ ಮತ್ತು ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಾಯಂದಿರು ಕೊರೊನಾ ಸೋಂಕಿಗೆ ತುತ್ತಾಗಿದ್ದರೂ ಶಿಶುಗಳಿಗೆ ಎದೆಯ ಹಾಲು ನೀಡುವುದನ್ನು ಮುಂದುವರೆಸಬೇಕು. ಈ ಯಾವುದೇ ಆತಂಕ ಬೇಡ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ಸೂಚಿಸಿದೆ.

Mothers should continue to breastfeed
ಸೋಂಕಿದ್ದರೂ ತಾಯಂದಿರು ಶಿಶುಗಳಿಗೆ ಎದೆಹಾಲು ಉಣಿಸಿ
author img

By

Published : Aug 5, 2020, 2:36 PM IST

ನವದೆಹಲಿ: ಕೊರೊನಾ ಸೋಂಕು ತಗುಲಿದ್ದರೂ ತಾಯಂದಿರು ಶಿಶುಗಳಿಗೆ ಎದೆಹಾಲು ಉಣಿಸುವುದನ್ನು ಮುಂದುವರೆಸಬೇಕು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ (ಡಬ್ಲ್ಯೂಸಿಡಿ) ಹೇಳಿದೆ.

ಮಾರ್ಗಸೂಚಿಗಳ ಪ್ರಕಾರ, ತಾಯಿ ಕೋವಿಡ್​-19 ಸೋಂಕಿಗೆ ಒಳಗಾದರೂ ಶಿಶುಗಳ ಬೆಳವಣಿಗೆಗೆ, ಪೌಷ್ಠಿಕತೆ ಮತ್ತು ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ಎದೆಹಾಲು ನೀಡಲು ತಾಯಂದಿರಿಗೆ ಭರವಸೆ ನೀಡಬೇಕು ಎಂದು ಸಚಿವಾಲಯವು ಎಲ್ಲಾ ಕ್ಷೇತ್ರದ ಕಾರ್ಯಕರ್ತರು ಮತ್ತು ಆರೋಗ್ಯ ಪೂರೈಕೆದಾರರಿಗೆ ಸೂಚನೆ ನೀಡಿದೆ.

ಸೋಂಕು ತಗುಲಿದ್ದರೂ ಸ್ತನ್ಯಪಾನವು ಮಗುವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತಾಯಂದಿರಿಗೆ ಧೈರ್ಯ ತುಂಬಿರುವ ಡಬ್ಲ್ಯೂಸಿಡಿ ಸಚಿವಾಲಯವು, ಸ್ತನ್ಯಪಾನದಿಂದ ಆಮ್ನಿಯೋಟಿಕ್ ದ್ರವ ಅಥವಾ ಎದೆ ಹಾಲಿನಲ್ಲಿ ಕೊರೊನಾ ವೈರಸ್​ ಕಂಡುಬಂದಿಲ್ಲ. ಅಂದರೆ ಗರ್ಭಾವಸ್ಥೆಯಲ್ಲಿ ಅಥವಾ ಎದೆ ಹಾಲಿನ ಮೂಲಕ ವೈರಸ್ ಹರಡುವುದಿಲ್ಲ. ತಾಯಂದಿರುವ ಭೀತಿಗೆ ಒಳಗಾಗುವುದು ಬೇಡ. ಧೈರ್ಯವಾಗಿರಿ ಎಂದು ಅದು ಸ್ಪಷ್ಟಪಡಿಸಿದೆ.

ಆರೋಗ್ಯ ಕ್ಷೇತ್ರದ ಕಾರ್ಯಕರ್ತರು ಈ ಕುರಿತು ತಾಯಂದರಿಗೆ ಅರಿವು ಮೂಡಿಸಬೇಕು. ಸೋಂಕು ಇದ್ದರೂ, ಇಲ್ಲದಿದ್ದರೂ ತಮ್ಮ ಶಿಶುಗಳಿಗೆ ಹಾಲುಣಿಸುವಿಕೆ ಪ್ರಾರಂಭಿಸಲು ಮತ್ತು ಮುಂದುವರಿಸಲು ಎಲ್ಲಾ ತಾಯಂದಿರಿಗೆ ಧೈರ್ಯ ತುಂಬಬೇಕು ಮತ್ತು ಬೆಂಬಲಿಸಬೇಕು ಎಂದು ಹೇಳಿದೆ.

ನಿಮ್ಮ ಮಗುವನ್ನು ಸಂಪರ್ಕಿಸುವ ಮೊದಲು ಮತ್ತು ನಂತರ ಕೈಗಳನ್ನು ಸೋಪ್​ ಅಥವಾ ಸ್ಯಾನಿಟೈಸರ್​​​ನಿಂದ ಉತ್ತಮವಾಗಿ ತೊಳೆಯಿರಿ. ಅದೇ ರೀತಿ ಆಹಾರ ನೀಡುವಾಗ ಶಿಶು ಅಥವಾ ಚಿಕ್ಕ ಮಗುವಿಗೆ ಒಂದು ಕಪ್‌ನಿಂದ ಆಹಾರವನ್ನು ನೀಡಿ ಮತ್ತು ಕಪ್, ಬಾಟಲಿಗಳು, ಟೀಟ್ಸ್ ಇತ್ಯಾದಿಗಳನ್ನು ನಿರ್ವಹಿಸುವ ಮೊದಲು ಸೋಪ್ ಮತ್ತು ನೀರಿನಿಂದ ಕೈ ತೊಳೆಯಿರಿ ಎಂದು ಸಲಹೆ ನೀಡಿದೆ.

ಪ್ರತಿ ವರ್ಷ ಆಗಸ್ಟ್ 1-7 ರವರೆಗೆ ವಿಶ್ವ ಸ್ತನ್ಯಪಾನ ವಾರ ಎಂದು ಆಚರಿಸಲಾಗುತ್ತದೆ. ಆರೋಗ್ಯದ ಪ್ರಯೋಜನಗಳನ್ನು ನೀಡುವ, ನಿರ್ಣಾಯಕ ಪೋಷಕಾಂಶಗಳನ್ನು ಒದಗಿಸುವ ಮತ್ತು ಮಾರಕ ಕಾಯಿಲೆಗಳಿಂದ ರಕ್ಷಿಸುವ ಜೀವನದ ಮೊದಲ ಆರು ತಿಂಗಳವರೆಗೆ ವಿಶೇಷ ಸ್ತನ್ಯಪಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.