ನವದೆಹಲಿ: ಮೋದಿ ಸರ್ಕಾರದ 2ನೇ ಅವಧಿಯ ನೂತನ ಸಚಿವ ಸಂಪುಟದಲ್ಲಿ ಒಟ್ಟು 58 ಸಚಿವರಿದ್ದಾರೆ. ಒಟ್ಟು 24 ಸಂಪುಟ ದರ್ಜೆ ಸಚಿವರಿದ್ದರೆ, 24 ರಾಜ್ಯ ಖಾತೆ ಹಾಗೂ 9 ಸ್ವತಂತ್ರ ಖಾತೆ ಸಚಿವರಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ 20 ಮಂದಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಮೊದಲ ಬಾರಿ ಸಚಿವರಾದವರ ಪಟ್ಟಿ ಹೀಗಿದೆ
ಸಂಪುಟ ದರ್ಜೆ ಸಚಿವರು
1. ಎಸ್. ಜೈಶಂಕರ್
2. ರಮೇಶ್ ಪೊಕ್ರೀಯಾಲ್ ನಿಶಾಂಕ್
3 ಅರ್ಜುನ್ ಮುಂಡ
4. ಪ್ರಹ್ಲಾದ್ ಜೋಶಿ
5. ಅರವಿಂದ್ ಸಾವಂತ್
ರಾಜ್ಯ ಖಾತೆ ಸಚಿವರು
1 ಪ್ರಹ್ಲಾದ್ ಸಿಂಗ್ ಪಟೇಲ್
2. ಜಿ.ಕಿಶನ್ ರೆಡ್ಡಿ
3. ಅನುರಾಗ್ ಠಾಕೂರ್
4. ಸಂಜಯ್ ಶಾಮ್ರಾವ್ ಧೋತ್ರೆ
5. ದೇಬೊಶ್ರೀ ಚೌಧರಿ
6. ಕೈಲಾಶ್ ಚೌದರಿ
7. ಪ್ರತಾಪ್ ಚಂದ್ರ ಸಾರಂಗಿ
8. ರಾಮೇಶ್ವರ್ ತೇಲಿ
9. ನಿತ್ಯಾನಂದ ರೈ
10. ರತನ್ ಲಾಲ್ ಕಠಾರಿಯ
11. ವಿ. ಮುರುಳಿಧರನ್
12. ರೇಣುಕಾ ಸಿಂಗ್ ಸರುತ
13. ಸೋಮ್ ಪ್ರಕಾಶ್
14. ಸುರೇಶ್ ಅಂಗಡಿ
ವಿಶೇಷ ಎಂದರೆ ಈ ಬಾರಿ ಅನಾರೋಗ್ಯದಿಂದಾಗಿ ಕಳೆದ ಬಾರಿ ಅತ್ಯುತ್ತಮ ಸಾಧನೆ ತೋರಿದ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಸುಷ್ಮಾ ಸ್ವರಾಜ್ ಈ ಮೊದಲೇ ಚುನಾವಣೆಯಿಂದ ಹಿಂದೆ ಸರಿದಿದ್ದರು. ಅರುಣ್ ಜೇಟ್ಲಿ ಮೋದಿ ಅವರಿಗೆ ಪತ್ರ ಬರೆದು ತಮಗೆ ವಿಶ್ರಾಂತಿ ಬೇಕೆಂದು ಮನವಿ ಮಾಡಿದ್ದರು.