ETV Bharat / bharat

23 ರೆಬಲ್ ನಾಯಕರ ಜತೆ ಸೋನಿಯಾ 5 ಗಂಟೆ ಸಭೆ: ಪಕ್ಷ ಬಲವರ್ಧನೆಗೆ ಸುದೀರ್ಘ ಚರ್ಚೆ - ಕಾಂಗ್ರೆಸ್ ನಾಯಕರ ಸಭೆ

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 23 ಹಿರಿಯ ಕಾಂಗ್ರೆಸ್ ನಾಯಕರ ಸಭೆಯನ್ನು ನಡೆಸಿದರು. ಅವರು ನಾಲ್ಕು ತಿಂಗಳ ಹಿಂದೆ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಹಾಗೂ ನಾಯಕತ್ವದ ಬಗ್ಗೆ ಪತ್ರ ಬರೆದಿದ್ದರು. ಸೋನಿಯಾ ಅವರ ಕೆಲವು ಆಪ್ತರನ್ನೂ ಒಳಗೊಂಡ ಐದು ಗಂಟೆಗಳ ಸಭೆ ನಡೆಯಿತು.

Sonia
ಸೋನಿಯಾ
author img

By

Published : Dec 19, 2020, 10:34 PM IST

ನವದೆಹಲಿ: ಪಕ್ಷದ ಸಂಘಟನೆ ಬಗ್ಗೆ ಕೂಲಂಕಷ ಪರಿಶೀಲನೆಗಾಗಿ ಕೆಲವು ತಿಂಗಳ ಹಿಂದೆ ಪತ್ರ ಬರೆದಿದ್ದ ಪಕ್ಷದ ಮುಖಂಡರ ತಂಡದ ಜತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸಭೆ ನಡೆಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 23 ಹಿರಿಯ ಕಾಂಗ್ರೆಸ್ ನಾಯಕರ ಸಭೆಯನ್ನು ನಡೆಸಿದರು. ಅವರು ನಾಲ್ಕು ತಿಂಗಳ ಹಿಂದೆ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಹಾಗೂ ನಾಯಕತ್ವದ ಬಗ್ಗೆ ಪತ್ರ ಬರೆದಿದ್ದರು. ಸೋನಿಯಾ ಅವರ ಕೆಲವು ಆಪ್ತರನ್ನೂ ಒಳಗೊಂಡ ಐದು ಗಂಟೆಗಳ ಸಭೆ ನಡೆಯಿತು.

ಅಶೋಕ್ ಗೆಹ್ಲೋಟ್, ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಬಿ ಎಸ್ ಹೂಡಾ, ಅಂಬಿಕಾ ಸೋನಿ ಮತ್ತು ಪಿ ಚಿದಂಬರಂ ಅವರು ಜನಪಥ್ ರಸ್ತೆಯಲ್ಲಿರುವ ಸೋನಿಯಾ ಅವರ ನಿವಾಸಕ್ಕೆ ಆಗಮಿಸಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಮನುಷ್ಯರಿಗಿಂತ ಭಿನ್ನವಲ್ಲ ಮೂಕ ಪ್ರಾಣಿಗಳ ಪ್ರೀತಿ -ವಾತ್ಸಲ್ಯ: ಹೀಗಿದೆ ತಾಯಿ ಹಸುವಿನ ರೋಧನೆ

ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪ್ರತಿಪಾದಿಸಿದ ಸೋನಿಯಾ ಗಾಂಧಿ ನಿಷ್ಠಾವಂತ ಪಕ್ಷದ ಮುಖಂಡ ಪವನ್ ಬನ್ಸಾಲ್, ಈ ಸಭೆಯಲ್ಲಿ ಎಲ್ಲ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪಕ್ಷ ಬಲಪಡಿಸುವ ಮಾರ್ಗಗಳನ್ನು ಸೂಚಿಸುವ ಮೂಲಕ ಅನುಕೂಲಕರ ವಾತಾವರಣ ತರಲು ಬಯಸಿದ್ದಾರೆ ಎಂದು ಹೇಳಿದರು.

ನಾವು ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಿದ್ದೇವೆ. ಇದೊಂದು ರಚನಾತ್ಮಕ ಸಭೆಯಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಪಕ್ಷದ ಈಗಿನ ಪರಿಸ್ಥಿತಿ ಮತ್ತು ಅದನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.