ETV Bharat / bharat

ಇಟಲಿಯಿಂದ ಬಂದ ತಿಂಗಳ ನಂತರ ಸ್ವಸ್ಥಾನಕ್ಕೆ ಮರಳಿದ ವಿದ್ಯಾರ್ಥಿಗಳು

ಇಟಲಿಯಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದ್ದ 33 ತೆಲುಗು ವಿದ್ಯಾರ್ಥಿಗಳನ್ನು ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕ್ವಾರಂಟೈನ್​​ಗೆ ಒಳಪಡಿಸಿದ್ದರು. ಮಾರ್ಚ್​ 15 ರಿಂದ 29ರ ವರೆಗೂ ನಿಗಾದಲ್ಲಿದ್ದ ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಸೋಂಕು ಕಾಣಿಸದ ಹಿನ್ನೆ ಲೆ ಅವರನ್ನು ತಮ್ಮ ಸ್ವಸ್ಥಾನಕ್ಕೆ ಕಳುಹಿಸಲಾಗಿದೆ.

month-after-return-from-italy-group-of-telugu-students-back-home
ಮೀಲನ್​ ವಿಶೇಷ ವಿಮಾನ
author img

By

Published : Apr 14, 2020, 3:56 PM IST

ವಿಜಯವಾಡ: ಮಹಾಮಾರಿ ಕೋವಿಡ್​ -19 ವೈರಸ್​​ನಿಂದ ಧ್ವಂಸಗೊಂಡ ಇಟಲಿಯಿಂದ ಸ್ಥಳಾಂತರಿಸಲ್ಪಟ್ಟ ಸುಮಾರು ಒಂದು ತಿಂಗಳ ನಂತರ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕ್ವಾರಂಟೈನ್​ನಲ್ಲಿದ್ದ 33 ಆಂಧ್ರಪ್ರದೇಶದ ಮೂಲದ ವಿದ್ಯಾರ್ಥಿಗಳು ಮರಳಿ ತಮ್ಮ ನಾಡನ್ನು ತಲುಪಿದ್ದಾರೆ.

ಕ್ವಾರಂಟೈನ ಮುಗಿದ ನಂತರ ಚಾವ್ಲಾದ ಐಟಿಬಿಪಿ ಶಿಬಿರದ ಅಧಿಕಾರಿಗಳು ಅವರಿಗೆ ಸಹಾಯ ಮಾಡಲು ನಿರಾಕರಿಸಿದ್ದರಿಂದ ಸ್ವತಃ ವಿದ್ಯಾರ್ಥಿಗಳು ಸ್ವಂತ ಹಣದಿಂದ ಬಸ್​ ವ್ಯವಸ್ಥೆ ಮಾಡಿಕೊಂಡು ತಮ್ಮ ಸ್ಥಾನಕ್ಕೆ ಮರಳಿ ಬಂದಿದ್ದಾರೆ. ಮಾರ್ಚ್ 15 ರಂದು ವಿಶೇಷ ಏರ್ ಇಂಡಿಯಾ ವಿಮಾನ ಮಿಲನ್​ ಮೂಲಕ ಭಾರತ ಸರ್ಕಾರ, ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆ ತಂದಿತ್ತು. ಮಾರ್ಚ್​ 15 ರಿಂದ 29 ರವರೆಗೂ ಕ್ವಾರಂಟೈನ್​ನಲ್ಲಿದ್ದ ವಿದ್ಯಾರ್ಥಿಗಳನ್ನು ನಿತ್ಯ ಪರೀಕ್ಷಿಸಲಾಗುತ್ತಿತ್ತು. ಅವರಲ್ಲಿ ಯಾವುದೇ ರೀತಿಯ ಸೋಂಕು ಕಂಡು ಬಾರದ ಕಾರಣ ಬಿಡುಗಡೆಗೊಳಿಸಲಾಗಿದೆ.

ವರದಿಯ ಪ್ರಕಾರ ಒಬ್ವ ವಿದ್ಯಾರ್ಥಿ ಚತ್ತೀಸ್​ಗಢದಲ್ಲಿ ಇಳಿದಿದ್ದರೆ, ನಾಲ್ವರು ಉತ್ತರ ಆಂಧ್ರ ಮತ್ತು ಉಳಿದ 28 ಮಂದಿ ವಿಜಯವಾಡ ತಲುಪಿದ್ದಾರೆ. ಹಾಗೂ ವಿದ್ಯಾರ್ಥಿಗಳ ವಿವರಗಳನ್ನು ಪಡೆದ ಅಧಿಕಾರಿಗಳು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಮತ್ತು ಗುಂಟೂರು, ಪ್ರಕಾಶಂ, ಕರ್ನೂಲ್, ಕಡಪ ಮತ್ತು ನೆಲ್ಲೂರು ಜಿಲ್ಲೆಗಳಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿದ್ದರೆ, ಕೃಷ್ಣ ಜಿಲ್ಲೆಯವರನ್ನು ವೈದ್ಯಕೀಯ ತಪಾಸಣೆಗಾಗಿ ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿದ್ದ ಬಸ್​​​ ಲಾಕ್​ಡೌನ್​ ಉಲ್ಲಂಘನೆಯಿಂದಾಗಿ ಛತ್ತೀಸ್​​ಗಢದಲ್ಲಿ ಬಸ್​ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತದನಂತರ ಆಂಧ್ರ ಪ್ರದೇಶ ಸರ್ಕಾರ ಮತ್ತು ಗೃಹ ಸಚಿವಾಲಯ ಮಧ್ಯ ಪ್ರವೇಶಿಸಿ ಬಸ್​ ಪ್ರಯಾಣಕ್ಕೆ ಅನುಮತಿ ಪಡೆದುಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.