ನವದೆಹಲಿ: ಜೂನ್ 1 ಮತ್ತು ಜೂನ್ 5ರ ನಡುವೆ ನೈಋತ್ಯ ಮಾನ್ಸೂನ್ ಮಾರತುಗಳು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್ ಜೆನಮಣಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೆನಮಣಿ, ಜೂನ್ 5ರ ಒಳಗಾಗಿ ಮಾನ್ಸೂನ್ ಕೇರಳದ ಕರಾವಳಿ ತಲುಪಲಿದ್ದು, ಜೂನ್ 20ರ ಒಳಗೆ ಮುಂಬೈ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಭಾರತವು ಈ ವರ್ಷದ ಗರಿಷ್ಠ ತಾಪಮಾನ ಕಂಡಿದೆ. ಕಳೆದ 2 ದಿನಗಳಲ್ಲಿ 47.6ರಷ್ಟು ತಾಪಮಾನ ದಾಖಲಾಗಿದೆ. ಮೇ 28ರಿಂದ ಶಾಖದ ಅಲೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಭಾರತದ ಉತ್ತರ ಭಾಗಗಳಲ್ಲಿ ಪೂರ್ವ ಗಾಳಿ ಬೀಸುತ್ತಿದ್ದು, ಮೇ 29ರಿಂದ ಗುಡುಗು ಸಹಿತ ಮಳೆಯಾಗಲು ಪ್ರಾರಂಭವಾಗುತ್ತದೆ ಮತ್ತು ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದಿದ್ದಾರೆ.