ETV Bharat / bharat

ಕ್ವಾರಂಟೈನ್​​​ನಲ್ಲಿರುವ ಕೊರೊನಾ ಸೋಂಕಿತರಿಂದ ನರ್ಸ್​​ಗಳಿಗೆ ಕಿರುಕುಳ: ದೂರು ದಾಖಲು

ನರ್ಸ್​​ಗಳಿಗೆ ಕಿರುಕುಳ ನೀಡಿದ ಹಿನ್ನೆಲೆ ಗಾಜಿಯಾಬಾದ್‌ನಲ್ಲಿ ಕ್ವಾರಂಟೈನ್​​​ನಲ್ಲಿ ಇರಿಸಲಾಗಿರುವ ತಬ್ಲೀಘಿ ಜಮಾತ್ ಕೊರೊನಾ ಸೋಂಕಿತರ ವಿರುದ್ಧ ಪ್ರಕರಣ ದಾಖಲಾಗಿದೆ.

molestation case
ಕೊರೊನಾ ರೋಗಿಗಳಿಂದ ನರ್ಸ್​​ಗಳಿಗೆ ಕಿರುಕುಳ
author img

By

Published : Apr 3, 2020, 12:35 PM IST

ನವದೆಹಲಿ/ಗಾಜಿಯಾಬಾದ್​​: ಕೊರೊನಾ ಸೋಂಕು ಹಿನ್ನೆಲೆ ಗಾಜಿಯಾಬಾದ್‌ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್​​​ನಲ್ಲಿ ಇರಿಸಲಾಗಿರುವ ತಬ್ಲೀಘಿ ಜಮಾತ್ ಗೆ ತೆರಳಿ ವಾಪಸಾಗಿದ್ದ ಸೋಂಕಿತರು ಆಸ್ಪತ್ರೆಯ ನರ್ಸ್​​ಗಳಿಗೆ ಕಿರುಕುಳ ನೀಡಿದ್ದಾರೆ.

ಕ್ವಾರಂಟೈನ್​​​ನಲ್ಲಿರುವ ರೋಗಿಗಳಿಂದ ನರ್ಸ್​​ಗಳಿಗೆ ಕಿರುಕುಳ

ಈ ಹಿನ್ನೆಲೆ ರೋಗಿಗಳ ವಿರುದ್ಧ ದೂರು ದಾಖಲಾಗಿರುವುದಾಗಿ ಎಸ್​ಎಸ್​​ಪಿ ಕಲಾನಿಧಿ ನೈಥಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಪ್ರಕರಣ ತುಂಬಾ ಗಂಭೀರವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಎಸ್​​ಪಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸೆಕ್ಷನ್​ 354, 294, 509, 269, 270, 271 ಅಡಿ ಕೇಸ್​ ದಾಖಲಾಗಿದೆ.

ಪ್ರಾಥಮಿಕ ತನಿಖೆ ನಡೆದಿದ್ದು, ಈಗಾಗಲೇ ಆರೋಪಿಗಳ ವಿರುದ್ಧ ಎಫ್​​ಐಆರ್​​ ಕೂಡ ದಾಖಲಾಗಿದೆ.ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.