ETV Bharat / bharat

ಸಿಎಂಗಳೊಂದಿಗೆ ನಮೋ ವಿಡಿಯೊ ಸಂವಾದ​: ಲಾಕ್​ಡೌನ್​ ಮುಂದುವರಿಕೆ ಕಷ್ಟ ಎಂದ ಕೆಲ ರಾಜ್ಯಗಳು - ಸಿಎಂಗಳೊಂದಿಗೆ ನಮೋ ಸಂವಾದ

ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ 5ನೇ ಸಲ ವಿಡಿಯೊ ಕಾನ್ಫರೆನ್ಸ್​ ನಡೆಸಿ, ಮಹತ್ವದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Modi's 5th video conference
Modi's 5th video conference
author img

By

Published : May 11, 2020, 4:14 PM IST

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್​ ವಿರುದ್ಧ ಹೋರಾಟ ಮುಂದುವರೆದಿದ್ದು, ಈಗಾಗಲೇ ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ 3.0 ಮೇ.17ರವರೆಗೆ ಮುಂದುವರಿಯಲಿದೆ. ಇದರ ಮಧ್ಯೆ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಮಹತ್ವದ ವಿಡಿಯೊ ಸಂವಾದ​ ನಡೆಸುತ್ತಿದ್ದಾರೆ.

ದೇಶದಲ್ಲಿ ಆರ್ಥಿಕ ಸಂಕಷ್ಟ, ವಲಸೆ ಕಾರ್ಮಿಕರ ಸಮಸ್ಯೆ, ಕೊರೊನಾ ಹತೋಟಿಗೆ ತರುವಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಸೇರಿದಂತೆ ಲಾಕ್​ಡೌನ್​ ಮುಂದುವರಿಕೆ ವಿಚಾರವಾಗಿ ಮಾತುಕತೆ ನಡೆಯುತ್ತಿದೆ.

ಸಿಎಂಗಳೊಂದಿಗೆ ನಮೋ ವಿಡಿಯೋ ಕಾನ್ಫರೆನ್ಸ್

ವಿಡಿಯೊ ಸಂವಾದದ ವೇಳೆ ಮಹಾರಾಷ್ಟ್ರ, ಗುಜರಾತ್​, ತಮಿಳುನಾಡು ಸಿಎಂಗಳು ಲಾಕ್​ಡೌನ್​ ಮುಂದೂಡಿಕೆ ಮಾಡಿ ಮತ್ತೊಮ್ಮೆ ಆದೇಶ ಹೊರಡಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾಗಿ ತಿಳಿದು ಬಂದಿದೆ. ಈಗಾಗಲೇ ಗುರುತಿಸಲಾಗಿರುವ ಝೋನ್​ಗಳಲ್ಲಿ ಮತ್ತಷ್ಟು ಸಡಲಿಕೆ ನೀಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿವೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ರಾಜ್ಯವನ್ನು ಬೇರೆ ರೀತಿಯಲ್ಲಿ ನೋಡಲಾಗುತ್ತಿದ್ದು, ಕೇಂದ್ರದಿಂದ ಕಡೆಗಣನೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಸೇರಿದಂತೆ ಅನೇಕ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.