ETV Bharat / bharat

ಮೋದಿ ವಿಡಿಯೋ ಕಾನ್ಫರೆನ್ಸ್​​​​: ಆರ್ಥಿಕತೆ, ಲಾಕ್​ಡೌನ್​ ಸಡಿಲಿಕೆ ಕುರಿತು ಮಹತ್ವದ ಚರ್ಚೆ - ದೇಶದಲ್ಲಿ ಲಾಕ್​ಡೌನ್​

ದೇಶಾದ್ಯಂತ ಈಗಾಗಲೇ 3.0 ಲಾಕ್​ಡೌನ್ ಜಾರಿಯಲ್ಲಿದ್ದು, ಅದು ಮುಕ್ತಾಯಗೊಂಡ ಬಳಿಕ ತೆಗೆದುಕೊಳ್ಳಬೇಕಾದ ಮುಂದಿನ ಹಂತಗಳ ಬಗ್ಗೆ ನಮೋ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ.

Modi to interact with CMs
Modi to interact with CMs
author img

By

Published : May 11, 2020, 10:11 AM IST

Updated : May 11, 2020, 3:42 PM IST

ನವದೆಹಲಿ: ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್​ಡೌನ್​ 3.0 ಮೇ. 17ಕ್ಕೆ ಮುಕ್ತಾಯಗೊಳ್ಳಲಿದ್ದು, ಅದು ಕೊನೆಗೊಳ್ಳಲು ಕೇವಲ ಆರು ದಿನ ಮಾತ್ರ ಬಾಕಿ ಉಳಿದಿರುವ ಕಾರಣ ಪ್ರಧಾನಿ ಮೋದಿ ಇಂದು ಎಲ್ಲ ರಾಜ್ಯದ ಸಿಎಂಗಳೊಂದಿಗೆ ಮಹತ್ವದ ವಿಡಿಯೋ ಕಾನ್ಫರೆನ್ಸ್​​​ ಮೂಲಕ ಚರ್ಚೆ ನಡೆಸುತ್ತಿದ್ದಾರೆ.

ದೇಶದಲ್ಲಿ ಕಳೆದ ಒಂದೂವರೆ ತಿಂಗಳಿಂದ ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ವಿವಿಧ ರಾಜ್ಯಗಳಲ್ಲಿನ ಆರ್ಥಿಕ ಸ್ಥಿತಿ ಹಾಗೂ ಲಾಕ್​ಡೌನ್​ ಯಾವ ರೀತಿಯಾಗಿ ಸಡಿಲಿಕೆ ಮಾಡಬಹುದು ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ಕಾರಣ ಅವುಗಳನ್ನ ಪುನಾಃರಂಭ ಮಾಡುವ ಸಲುವಾಗಿ ಮೋದಿ ಎಲ್ಲ ರಾಜ್ಯದ ಸಿಎಂಗಳಿಂದ ಮಹತ್ವದ ಮಾಹಿತಿ ಪಡೆಕೊಳ್ಳುತ್ತಿದ್ದಾರೆ.

ಈಗಾಗಲೇ ರೆಡ್​, ಗ್ರೀನ್​ ಹಾಗೂ ಆರೆಂಜ್​ ಝೋನ್​ಗಳಾಗಿ ವಿವಿಧ ಜಿಲ್ಲೆಗಳನ್ನ ವಿಂಗಡಣೆ ಮಾಡಲಾಗಿದ್ದು, ಮೇ. 17ರ ನಂತರ ಇದರಲ್ಲಿ ಮತ್ತಷ್ಟು ಬದಲಾವಣೆ ತಂದು ಜನರಿಗೆ ಲಾಕ್​ಡೌನ್​ ಸಡಿಲಿಕೆ ನೀಡುವ ಸಾಧ್ಯತೆ ಕುರಿತು ನಮೋ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇಂದು ಎಲ್ಲ ರಾಜ್ಯದ ಸಿಎಂಗಳೊಂದಿಗೆ ನಮೋ ಮಾತು... ಲಾಕ್​ಡೌನ್​ ಬಗ್ಗೆ ಮಹತ್ವದ ನಿರ್ಧಾರ!?

ಮೋದಿ ತಮ್ಮ ಸಲಹೆ - ಸೂಚನೆ ನೀಡುವುದಕ್ಕೂ ಮುಂಚಿತವಾಗಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿನ ಸ್ಥಿತಿ ಗತಿ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಮೇ.17ರ ಬಳಿಕ ಯಾವೆಲ್ಲ ಸಡಿಲಿಕೆ ನೀಡಬಹುದು ಎಂಬುದರ ಕುರಿತು ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ.

ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬಂದಿರುವ ಕಂಟೇನ್​ಮೆಂಟ್​ ಪ್ರದೇಶಗಳಲ್ಲಿ ಲಾಕ್​ಡೌನ್​ ಮುಂದೂಡಿಕೆ ಮಾಡಿ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಇನ್ನು ತೆಲಂಗಾಣದಲ್ಲಿ ಈಗಾಗಲೇ ಮೇ. 29ರವರೆಗೆ ಲಾಕ್​ಡೌನ್​ ಮುಂದೂಡಿಕೆಯಾಗಿದ್ದು, ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್​, ನವದೆಹಲಿ, ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ಕಂಡು ಬರುತ್ತಿರುವ ಕಾರಣ ಅದರ ವಿರುದ್ಧದ ಹೋರಾಟ ಮತ್ತಷ್ಟು ಗಟ್ಟಿಗೊಳಿಸುವಂತೆ ಮಾಹಿತಿ ನೀಡಬಹುದಾಗಿದೆ.

Last Updated : May 11, 2020, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.