ETV Bharat / bharat

ಡಿಸೆಂಬರ್ 8ಕ್ಕೆ ಇಂಡಿಯನ್ ಮೊಬೈಲ್​ ಕಾಂಗ್ರೆಸ್ ಕಾರ್ಯಕ್ರಮ: ಪ್ರಧಾನಿಯಿಂದ ಭಾಷಣ - ಪ್ರಧಾನಿ ಮೋದಿ ಇತ್ತೀಚಿನ ಸುದ್ದಿ

ಮಂಗಳವಾರ ಬೆಳಗ್ಗೆ ಇಂಡಿಯನ್ ಮೊಬೈಲ್​ ಕಾಂಗ್ರೆಸ್ ಕಾರ್ಯಕ್ರಮ ಆರಂಭವಾಗಲಿದ್ದು, ಆತ್ಮನಿರ್ಭರ್ ಭಾರತ್, ಡಿಜಿಟಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

pm modi
ಪ್ರಧಾನಿ ಮೋದಿ
author img

By

Published : Dec 7, 2020, 5:16 PM IST

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದಿನಗಳ 'ಇಂಡಿಯನ್ ಮೊಬೈಲ್ ಕಾಂಗ್ರೆಸ್-2020 (ಐಎಂಸಿ-2020) ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.

ಮಂಗಳವಾರ ಬೆಳಗ್ಗೆ 10.45ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆತ್ಮನಿರ್ಭರ್ ಭಾರತ್, ಡಿಜಿಟಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಆವಿಷ್ಕಾರಕ್ಕೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಈ ಕಾರ್ಯಕ್ರಮವನ್ನು ಆಯೋಜಿಲಾಗುತ್ತಿದ್ದು, ಇದು ಮೂರು ದಿನಗಳ ಕಾಲ ಅಂದರೆ ಡಿಸೆಂಬರ್ 8ರಿಂದ 10ರವರೆಗೆ ನಡೆಯಲಿದೆ.

ಇದನ್ನೂ ಓದಿ: ಆಗ್ರಾ ಮೆಟ್ರೋ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ

ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳನ್ನು ಹೆಚ್ಚಿಸಲು, ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಇಂಡಿಯನ್ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮ ಹೊಂದಿದೆ.

ವಿವಿಧ ಸಚಿವಾಲಯಗಳು, ಟೆಲಿಕಾಂ ಸಿಇಒಗಳು, ಕೃತಕ ಬುದ್ದಿಮತ್ತೆ (ಎಐ), ಡಾಟಾ ಅನಾಲಿಟಿಕ್ಸ್, ಸೈಬರ್-ಸೆಕ್ಯುರಿಟಿ ಮುಂತಾದ ವಲಯಗಳ ಉದ್ಯಮಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ಈ ಬಾರಿಯ ಕಾರ್ಯಕ್ರಮ ಕೋವಿಡ್ ಭೀತಿಯಿಂದಾಗಿ ಆನ್​ಲೈನ್​ನಲ್ಲಿ ನಡೆಯಲಿದ್ದು, ಕೇಂದ್ರದ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್​ ಮುಂತಾದವರು ಭಾಗವಹಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.