ETV Bharat / bharat

ಕೊರೊನಾ ವಾರಿಯರ್ಸ್​ಗೆ ಸಶಸ್ತ್ರ ಪಡೆಗಳ ಗೌರವ: ವಿಡಿಯೋ ತುಣುಕು ಹರಿಬಿಟ್ಟ ಪ್ರಧಾನಿ - ವಿಡಿಯೋ ತುಣುಕು ಹರಿಬಿಟ್ಟ ಪ್ರಧಾನಿ

ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಸಶಸ್ತ್ರ ಪಡೆಗಳು ಇಂದು ವಿಶೇಷವಾಗಿ ಗೌರವ ಸಲ್ಲಿಕೆ ಮಾಡಿದ್ದು, ಅದರ ವಿಡಿಯೋ ನಮೋ ಟ್ವೀಟ್ ಮಾಡಿದ್ದಾರೆ.

modi
modi
author img

By

Published : May 3, 2020, 7:48 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಅಬ್ಬರ ಜೋರಾಗಿದ್ದು, ಅದರ ವಿರುದ್ಧದ ಹೋರಾಟದಲ್ಲಿ ಇಡೀ ಭಾರತವೇ ಒಂದಾಗಿದೆ. ಡೆಡ್ಲಿ ವೈರಸ್​ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಇಂದು ಸಶಸ್ತ್ರ ಪಡೆಗಳು ಹೂಮಳೆ ಸುರಿಸುವ ಮೂಲಕ ಗೌರವ ಸಲ್ಲಿಕೆ ಮಾಡಿವೆ.

ಇದರ ಬೆನ್ನಲ್ಲೇ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಕೆ ಮಾಡಿರುವ ನಮೋ ಅದರ ಮಹತ್ವದ ಕಾರ್ಯದ ವಿಡಿಯೋ ತುಣುಕು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. 2.16 ನಿಮಿಷದ ಈ ವಿಡಿಯೋದಲ್ಲಿ ಮಿಲಿಟರಿ ಬ್ಯಾಂಡ್​ ಸಂಗೀತ ಹಾಗೂ ಹೆಲಿಕಾಪ್ಟರ್​ಗಳು ವಿವಿಧ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡಿರುವ ದೃಶ್ಯಗಳಿದ್ದು, ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹೊಡೆಯುತ್ತಿರುವ ದೃಶ್ಯಗಳು ಇದರಲ್ಲಿ ಸೆರೆಯಾಗಿವೆ

  • Saluting those who are at the forefront, bravely fighting COVID-19.

    Great gesture by our armed forces. pic.twitter.com/C5qtQqKxmA

    — Narendra Modi (@narendramodi) May 3, 2020 " class="align-text-top noRightClick twitterSection" data=" ">

ಕೊರೊನಾ ವಿರುದ್ಧ ಹೋರಾಟ ನಡೆಸಿರುವ ಸಿಬ್ಬಂದಿಗಳಿಗೆ ಭಾರತೀಯ ವಾಯುಸೇನೆ ಹೂಮಳೆ ಸುರಿದಿದ್ದು, ಭೂ ಸೇನೆ ಬ್ಯಾಂಡ್​ಗಳ ಮೂಲಕ ವೈದ್ಯಕೀಯ ಹಾಗೂ ಪೊಲೀಸ್​ ಸಿಬ್ಬಂದಿಗಳಿಗೆ ಗೌರವ ಸಲ್ಲಿಕೆ ಮಾಡಿದ್ದು, ಭಾರತೀಯ ನೌಕಾಸೇನೆ ಸಮುದ್ರದಲ್ಲಿ ಯುದ್ಧ ಹಡಗಗಳನ್ನು ಬೆಳಗಿಸುವ ಮೂಲಕ ಗೌರವ ಸಲ್ಲಿಕೆ ಮಾಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಬೆಂಗಳೂರು ಸೇರಿದಂತೆ ದೇಸದ ಎಲ್ಲಾ ಮಹಾನಗರಗಳಲ್ಲಿ ವಾಯುಸೇನೆ ಇಂದು ಫ್ಲೈಪಾಸ್ಟ್ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಕೆ ಮಾಡಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಾಗೂ ಗುಜರಾತ್‌ನಿಂದ ಅಸ್ಸಾಂವರೆಗೆ ಇಡೀ ದೇಶದಲ್ಲಿ ವಾಯುಸೇನೆ ಕೊರೊನಾ ಧೀರರಿಗೆ ಗೌರವ ಸಲ್ಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.