ಅಮರಾವತಿ: ಪ್ರಧಾನಿ ನರೇಂದ್ರ ಮೋದಿ ಹುಸಿ ಚೌಕಿದಾರ. ಅಪರಾಧಿಗಳನ್ನು ಮಾತ್ರ ಅವರು ರಕ್ಷಿಸುತ್ತಾರೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದರು.
ಚೌಕಿದಾರನೆಂದು ಕರೆದುಕೊಳ್ಳಲು ನಿಮಗೆ ಯಾವ ಅಧಿಕಾರವಿದೆ? ನೀವು ಅಪರಾಧಿಗಳಿಗೆ ಮಾತ್ರ ಚೌಕಿದಾರ ಎಂದು ಕುಟುಕಿದರು.
ಜಗನ್ ಮೋಹನ್ ರೆಡ್ಡಿಯ ಅಕ್ರಮ ಆಸ್ತಿ ಪ್ರಕರಣದಲ್ಲಿ ಹೊಸ ಮೆಮೊ ದಾಖಲಿಸುವಂತೆ 2017ರಲ್ಲಿ ಜಾರಿ ನಿರ್ದೇಶನಾಲಯ ಸಿಬಿಐಗೆ ಪತ್ರ ಬರೆದಿತ್ತು. ಆದರೆ ಸಿಬಿಐ ಈ ಕೆಲಸ ಮಾಡೇ ಇಲ್ಲ. ಇದಕ್ಕೆ ಕಾರಣ ಪ್ರಧಾನಿ ಮೋದಿ, ಜಗನ್ರಂತವರನ್ನು ರಕ್ಷಿಸುತ್ತಿರುವುದೇ ಕಾರಣ. ತೆಲಂಗಾಣ ಸರ್ಕಾರವೂ ಸಹ ಅಕ್ರಮ ಭೂಮಿ ಹಂಚಿಕೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.
ಜಗನ್ ಪ್ರಕರಣದಿಂದ ಬೇಲ್ ಪಡೆಯಲು ಮೋದಿ ಹಾಗೂ ಕೆಸಿಆರ್ಗೆ ಶರಣಾಗಿದ್ದಾರೆ. ಈ ಬಗ್ಗೆ ಮೋದಿ ಹಾಗೂ ಕೆಸಿಆರ್ ಸ್ಪಷ್ಟನೆ ನೀಡಬೇಕು ಎಂದೂ ಆಗ್ರಹಿಸಿದರು.