ಶ್ರೀನಗರ: ಕಣಿವೆಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮುನ್ನೆಚ್ಚರಿಕಾ ಕ್ರಮವಾಗಿ ಕಠಿಣ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದರಿಂದ ಇಂದು ಬೆಳಗ್ಗೆ ಸ್ವಾತಂತ್ರೋತ್ಸವ ಸಮಾರಂಭದ ವೇಳೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೇವೆಗಳನ್ನು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅವಧಿಯಲ್ಲಿ ಅಮಾನತುಗೊಳಿಸಲಾಗಿದ್ದು, ಈಗ ಮೊಬೈಲ್ ಫೋನ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಕೆಲ ಸಂದರ್ಭಗಳನ್ನು ಹೊರತುಪಡಿಸಿ ಸೆಕ್ಯುರಿಟಿ ಡ್ರಿಲ್ನ ಭಾಗವಾಗಿ ಮೊಬೈಲ್ ಫೋನ್ ಸೇವೆಗಳನ್ನು ಮತ್ತು ಮೊಬೈಲ್ ಸಾಧನಗಳಲ್ಲಿ ಇಂಟರ್ನೆಟ್ ಅಮಾನತುಗೊಳಿಸುವುದು 2005 ರಿಂದ ವಾಡಿಕೆಯಾಗಿದೆ.