ಗಾಂಧಿನಗರ (ಗುಜರಾತ್): ವಿಧಾನಸಭೆಯಲ್ಲಿ ಅನುಮತಿಯಿಲ್ಲದ ಪದ ಬಳಕೆ ಮಾಡಿದ ಆರೋಪದ ಮೇಲೆ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು 3 ದಿನಗಳ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಗುಜರಾತ್ ವಿಧಾನಸಭೆಯಲ್ಲಿ ಸಂವಿಧಾನ ದಿನದ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸಂವಿಧಾನದ ಕುರಿತು ಮಾತನಾಡುತ್ತಿದ್ದರು, ಈ ವೇಳೆ ಸಭೆಯಲ್ಲಿ ಬಳಸಲು ಅನುಮತಿ ಇಲ್ಲದ ಕೆಲವು ಪರಿಣಾಮಕಾರಿ ಪದಗಳನ್ನು ಬಳಸಿ ಮೇವಾನಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಪೀಕರ್ ರಾಜೇಂದ್ರ ತ್ರಿವೇದಿ, ಪದೇ ಪದೇ ಎಚ್ಚರಿಕೆ ನೀಡಿದರೂ ಮೇವಾನಿ ಮಾತು ನಿಲ್ಲಿಸದ ಕಾರಣ ಸದನದಿಂದ ಹೊರಕಳುಹಿಸಲಾಗಿದೆ.
ಶಾಸಕರ ಈ ವರ್ತನೆಯನ್ನು ನೋಡಿದ ಸ್ವತಃ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮೇವಾನಿಯನ್ನು ಕಲಾಪದ ಮೂರು ದಿನಗಳಿಂದ ಅಮಾನತುಗೊಳಿಸುವಂತೆ ಸ್ಪೀಕರ್ಗೆ ಒತ್ತಾಯಿಸಿದ್ದು, ಅಧಿವೇಶನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶ ನೀಡಿದ್ದಾರೆ.
ಡಿ.9 ರಂದು ಆರಂಭವಾದ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿ.11 ರಂದು ಮುಕ್ತಾಯಗೊಳ್ಳಲಿದೆ.