ಹೈದರಾಬಾದ್: ಗುರುವಾರ ಸಂಜೆ ನಾಪತ್ತೆಯಾಗಿದ್ದ ನಗರದ ನೆರೆಡ್‌ಮೆಟ್ ಕಾಕತಿಯಾ ನಗರದ 12 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಮೃತ ಬಾಲಕಿಯನ್ನು ಸುಮೇಧಾ ಕಪುರಿಯಾ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಮನೆಯಿಂದ ಸೈಕಲ್ನಲ್ಲಿ ತೆರಳಿದ ಸುಮೇಧಾ ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು.
![missing girl was found dead in Hyderabad](https://etvbharatimages.akamaized.net/etvbharat/prod-images/8845806_thu.jpg)
ಬಾಲಕಿಗಾಗಿ ಹಡುಕಾಟ ಆರಂಭಿಸಿದ ಪೊಲೀಸರು, ಚರಂಡಿಯೊಂದರಲ್ಲಿ ಆಕೆಯ ಸೈಕಲ್ ಪತ್ತೆ ಮಾಡಿದ್ದಾರೆ. ಇಂದು ಬಾಲಕಿಯ ಮೃತದೇಹ ನೆರೆಡ್‌ಮೆಟ್ ಬಂಡಾ ನದಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.