ಪಾಟ್ನಾ: ರಾಷ್ಟ್ರೀಯ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರನ್ನು ನೆನದು ಟ್ವೀಟ್ ಮಾಡಿರುವ ಪೋಸ್ಟ್ವೊಂದು ಸಾಕಷ್ಟು ಹರಿದಾಡುತ್ತಿದೆ.
ಪಾಟಲೀಪುತ್ರದಲ್ಲಿ ತೇಜ್ ಪ್ರತಾಪ್ರಿಗೆ ಚುನಾವಣಾ ಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸಿದ್ದಕ್ಕೆ ದುಃಖದಲ್ಲಿ ಅವರು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ತಂದೆಯ ಅನುಪಸ್ಥಿತಿಯಲ್ಲಿ ನನ್ನ ಭಾಷಣವನ್ನು ನಿರಾಕರಿಸಲಾಗಿದೆ. ಮಿಸ್ ಯು ಪಾಪಾ ಎಂದು ತೇಜ್ ಟ್ವೀಟ್ ಮಾಡಿದ್ದಾರೆ.
-
मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb
— Tej Pratap Yadav (@TejYadav14) May 16, 2019 " class="align-text-top noRightClick twitterSection" data="
">मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb
— Tej Pratap Yadav (@TejYadav14) May 16, 2019मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb
— Tej Pratap Yadav (@TejYadav14) May 16, 2019
ಇದರೊಟ್ಟಿಗೆ ಲಾಲೂ, ತೇಜ್ರ ಕೈಹಿಡಿದುಕೊಂಡು ಹೋಗುತ್ತಿರುವ ರೇಖಾಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಲಾಲೂ ಸದ್ಯ ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ನಿನ್ನೆ ಪಾಟಲೀಪುತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ನ ರಾಹುಲ್ ಗಾಂಧಿ ಹಾಗೂ ಆರ್ಜೆಡಿಯ ತೇಜಸ್ವಿ ಯಾದವ್ ಹಾಜರಿದ್ದರು. ಈ ಬಗ್ಗೆ ತೇಜ್ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ಆರ್ಜೆಡಿ ಪಕ್ಷದಲ್ಲಿ ತೇಜ್ರನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.