ನವದೆಹಲಿ: ಮಂಗಳ ಮತ್ತು ಗುರು ಗ್ರಹಗಳ ನಡುವಿನ ಒಂದು ಸಣ್ಣ ಗ್ರಹಕ್ಕೆ ಭಾರತೀಯ ಶಾಸ್ತ್ರೀಯ ಗಾಯಕ ಪಂಡಿತ್ ಜಸ್ರಾಜ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (ಐಎಯು) 2006ರ ನವೆಂಬರ್ 11ರಂದು ಮಂಗಳ ಮತ್ತು ಗುರು ಗ್ರಹಗಳ ನಡುವೆ ಸಣ್ಣ ಗ್ರಹ ಒಂದನ್ನು ಪತ್ತೆ ಮಾಡಿ ಅದಕ್ಕೆ ವಿಪಿ 32 (ಸಂಖ್ಯೆ- 300128) ಹೆಸರಿಟ್ಟಿತು. ಈಗ ಇದೇ ಗ್ರಹಕ್ಕೆ ಭಾರತೀಯ ಶಾಸ್ತ್ರೀಯ ಗಾಯಕ 'ಪಂಡಿತ್ಜಸ್ರಾಜ್' ಅವರ ಹೆಸರಿರಿಸಲಾಗಿದೆ.
ಸೌರಮಂಡಲದಲ್ಲಿ 'ಪಂಡಿತ್ಜಸ್ರಾಜ್' ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕಕ್ಷೆಯಲ್ಲಿ ಹಾದು ಹೋಗಲಿದೆ. ನೂತನ ನಾಮಕರಣವನ್ನು ಐಎಯು ಸೆಪ್ಟೆಂಬರ್ 23ರಂದು ಅಧಿಕೃತವಾಗಿ ಘೋಷಿಸಿತ್ತು.
ಪದ್ಮವಿಭೂಷಣ ಪ್ರಶಸ್ತಿ ಸ್ವೀಕೃತ ಪಂಡಿತ್ ಜಸ್ರಾಜ್ ಅವರು ಭಾರತೀಯ ಗಾಯಕರೊಬ್ಬರು ಇದೇ ಪ್ರಥಮ ಬಾರಿಗೆ ಮೊಜಾರ್ಟ್, ಬೀಥೋವೆನ್ ಮತ್ತು ಟೆನೋರ್ ಲೂಸಿಯಾನೊ ಪವರೊಟ್ಟಿ ಅರಂತಹ ಖ್ಯಾತ ಸಂಗೀತ ಸಂಯೋಜಕರ ನಕ್ಷತ್ರಪುಂಜಕ್ಕೆ ಸೇರ್ಪಡೆಯಾಗಿದ್ದಾರೆ.