ETV Bharat / bharat

ಮೊಬೈಲ್​​​​​ಗಾಗಿ ಜಗಳ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ​

ಸಹೋದರ ಮೊಬೈಲ್​ ನೀಡಲಿಲ್ಲ ಎಂಬ ಕಾರಣಕ್ಕೆ ಜಗಳ ನಡೆದು ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ರಾಜಸ್ಥಾನದಿಂದ ವರದಿಯಾಗಿದೆ.

minor girl commits suicide
ಮೊಬೈಲ್​​​​​ಗಾಗಿ ಜಗಳ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ​
author img

By

Published : Jul 9, 2020, 7:13 AM IST

Updated : Jul 9, 2020, 7:48 AM IST

ಜುಂಜುನ್(ರಾಜಸ್ಥಾನ): ಮೊಬೈಲ್​ ಗೀಳು ಎಂಬ ಮಹಾ ಅಂಟು ಜಾಡ್ಯ ಈಗೀಗ ಮಕ್ಕಳಿಗೆ ವಿಷಪ್ರಾಶವಾಗಿ ಮಾರ್ಪಾಡಾಗಿದೆ. ಇದಕ್ಕೆ ಇಂಬು ನೀಡುವಂತ ಒಂದು ಆಘಾತಕಾರಿ ಸುದ್ದಿಯೊಂದು ರಾಜಸ್ಥಾನದಲ್ಲಿ ನಡೆದಿದೆ.

ಮೊಬೈಲ್​​​​ ಗೀಳಿಗೆ ಬಿದ್ದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ರಾಜಸ್ಥಾನದ ಜುಂಜುನ್​​​​​ನಲ್ಲಿ ಈ ಘಟನೆ ನಡೆದಿದೆ. ಅಣ್ಣ- ತಂಗಿ ಇಬ್ಬರು ಮೊಬೈಲ್​ಗಾಗಿ ಕಿತ್ತಾಡಿಕೊಂಡಿದ್ದಾರೆ. ಈ ಸಂಬಂಧ ತಾಯಿ ಇಬ್ಬರಿಗೂ ಬೈದಿದ್ದಾರೆ. ಇದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.

ಮೊಬೈಲ್​​​​​ಗಾಗಿ ಜಗಳ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ​

ಬಾಲಕಿ ಕುಟುಂಬ ಹೇಳುವ ಪ್ರಕಾರ, 10 ವರ್ಷದ ಆಕೆಯ ಸಹೋದರನ ಹತ್ತಿರ ಮೊಬೈಲ್​ ಇತ್ತು. ಅದನ್ನ ತೆಗೆದುಕೊಳ್ಳಲು ಬಾಲಕಿ ಮುಂದಾಗಿದ್ದಾಳೆ. ಬಾಲಕ ಅದನ್ನು ನೀಡಲು ನಿರಾಕರಿಸಿದ್ದಾನೆ. ಕಾರಣ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಮಧ್ಯಪ್ರವೇಶಿಸಿದ ತಾಯಿ ಇಬ್ಬರನ್ನೂ ಗದರಿಸಿದ್ದಾರೆ. ಇಷ್ಟಕ್ಕೆ ಕೋಪ ಮಾಡಿಕೊಂಡು ಕೋಣೆಗೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ನೋಡಿದರೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Last Updated : Jul 9, 2020, 7:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.