ಅಮ್ರೋಹಾ(ಉತ್ತರ ಪ್ರದೇಶ): ಉತ್ತರಪ್ರದೇಶದ ಅಮ್ರೋಹಾದಲ್ಲಿ ಅಪ್ರಾಪ್ತೆ ಮೇಲೆ ಮದರಸಾ ಮ್ಯಾನೇಜರ್ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

12 ವರ್ಷದ ಬಾಲಕಿ ಮೇಲೆ ಈ ದುಷ್ಕೃತ್ಯ ಎಸಗಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಎಸ್ಪಿ ಅಜಯ್ ಪ್ರತಾಪ್ ತಿಳಿಸಿದ್ದಾರೆ.
ಮದರಸಾದಲ್ಲಿ ವಿದ್ಯಾರ್ಥಿನಿ ಮೇಲೆ ಕಾಮುಕ ಈ ರೀತಿಯ ಕೃತ್ಯ ನಡೆಸಿದ್ದಕ್ಕಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.