ETV Bharat / bharat

ಕುಸ್ತಿಪಟು ಸನ್ನಿ ಜಾಧವ್​ಗೆ ಕ್ರೀಡಾ ಇಲಾಖೆಯಿಂದ ಆರ್ಥಿಕ ಸಹಾಯ

ಮಧ್ಯಪ್ರದೇಶ ಮೂಲದ ಕುಸ್ತಿಪಟು ಸನ್ನಿ ಜಾಧವ್​ಗೆ ಕ್ರೀಡಾ ಸಚಿವಾಲಯ 2.5 ಲಕ್ಷ ರೂ.ಗಳ ಧನ ಸಹಾಯ ಮಾಡಿದೆ. ಪಂಡಿತ್ ದೀನ್​ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಜಾಧವ್‌ಗೆ ಆರ್ಥಿಕ ಸಹಾಯ ನೀಡಲಾಗಿದೆ.

ಸನ್ನಿ ಜಾಧವ್
ಸನ್ನಿ ಜಾಧವ್
author img

By

Published : Feb 4, 2021, 4:11 PM IST

ನವದೆಹಲಿ: ಒಂದೊತ್ತಿನ ಊಟಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಕುಸ್ತಿಪಟು ಸನ್ನಿ ಜಾಧವ್​ ಅವರನ್ನು ಗುರುತಿಸಿರುವ ಕ್ರೀಡಾ ಸಚಿವಾಲಯ, ಅವರಿಗೆ 2.5 ಲಕ್ಷ ರೂ.ಗಳ ಧನ ಸಹಾಯ ನೀಡಿದೆ.

ಧನಸಹಾಯ ದೊರಕಿರುವುದರಿಂದ ಮಧ್ಯಪ್ರದೇಶ ಮೂಲದ ಕುಸ್ತಿಪಟು ಸನ್ನಿ ಜಾಧವ್, ಇದೀಗ ತರಬೇತಿ ಪಡೆಯಬಹುದಾಗಿದೆ. ಅಲ್ಲದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ.

ಪಂಡಿತ್ ದೀನ್​ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಜಾಧವ್‌ಗೆ ಆರ್ಥಿಕ ಸಹಾಯ ನೀಡಲಾಗಿದೆ.

ರಾಜಸ್ಥಾನದ ಚಿತ್ತೋರ್‌ಗರ್​​ದಲ್ಲಿ ನಡೆದ ಅಂಡರ್ -23 ಜೂನಿಯರ್ ನ್ಯಾಷನಲ್ ರೆಸ್ಲಿಂಗ್ ಚಾಂಪಿಯನ್‌ಶಿಪ್-2018 ಮತ್ತು ಭುವನೇಶ್ವರದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2020 ರಲ್ಲಿ ನಡೆದ 60 ಕಿ.ಗ್ರಾಂ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಜಾಧವ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಓದಿ:ರೈತರು ರಾಷ್ಟ್ರದ ಜೀವನಾಡಿ, ಈ ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟಾಗಿ ನಿಲ್ಲೋಣ ಎಂದ ಯುವಿ!

ಆದರೆ ಕಳೆದ ಕೆಲವು ತಿಂಗಳುಗಳಿಂದ ಅವರು ತಮ್ಮ ಕುಸ್ತಿ ಅಭ್ಯಾಸದ ನಂತರ, ಒಂದೊತ್ತಿನ ಊಟಕ್ಕಾಗಿ ಇತರರ ವಾಹನಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಕಾರ್ಮಿಕ ಕೆಲಸಗಳನ್ನು ಮಾಡಬೇಕಾಗಿತ್ತು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ದೀನ್​​ದಯಾಳ್ ಉಪಾಧ್ಯಾಯ ನಿಧಿಯ ಮೂಲಕ ಕ್ರೀಡಾಪಟುಗಳಿಗೆ ತರಬೇತಿ, ಸಲಕರಣೆಗಳ ಖರೀದಿ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು 2.5 ಲಕ್ಷ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.