ETV Bharat / bharat

ರಾಜ್ಯಗಳು ಕಬ್ಬಿನ ಬೆಲೆ ಹೆಚ್ಚಿಸಿದರೂ ಕೇಂದ್ರದ ಕನಿಷ್ಠ ಬೆಲೆಯೂ ಅನ್ವಯ: ಸುಪ್ರೀಂಕೋರ್ಟ್​​ - ನ್ಯಾಯಮೂರ್ತಿ ಅರುಣ್ ಮಿಶ್ರಾ

ಈ ವಿಚಾರಣೆಯನ್ನು ಉನ್ನತ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ರಾಜ್ಯವು ನಿಗದಿಪಡಿಸಿದ ಬೆಲೆ ಹೆಚ್ಚಿದ್ದರೆ, ಕೇಂದ್ರವು ನಿಗದಿಪಡಿಸಿದ ಕನಿಷ್ಠ ಬೆಲೆ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಕೇಂದ್ರವು ನಿಗದಿಪಡಿಸಿದ ಬೆಲೆ ಶಾಸನಬದ್ಧ ಕನಿಷ್ಠ ಬೆಲೆ ಮತ್ತು ರಾಜ್ಯವು ನಿಗದಿಪಡಿಸಿದ ಬೆಲೆ ಸಲಹಾ ಕನಿಷ್ಠ ಬೆಲೆಯಾಗಿರಲಿದೆ ಎಂದು ಕೋರ್ಟ್ ತಿಳಿಸಿದೆ.

Minimum price set by centre is to be applied- SC order on sugarcane pricing
ರಾಜ್ಯಗಳು ಕಬ್ಬಿನ ಬೆಲೆ ಹೆಚ್ಚಿಸಿದರೂ ಕೇಂದ್ರದ ಕನಿಷ್ಠ ಬೆಲೆ ಅನ್ವಯ: ಸುಪ್ರೀಂಕೋರ್ಟ್​​
author img

By

Published : Apr 23, 2020, 12:05 AM IST

ನವದೆಹಲಿ: ಲಾಕ್​ಡೌನ್​ನಿಂದಾಗಿ ರೈತರು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಈ ನಡುವೆ ಕಬ್ಬು ಬೆಳೆಗಾರರ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ರಾಜ್ಯಸರ್ಕಾರಗಳು ಕಬ್ಬಿಗೆ ನಿಗದಿಪಡಿಸಿದ ಬೆಲೆ ಹೆಚ್ಚಿದ್ದರೆ, ಈ ಮೊದಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಸಹ ಅನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಈ ವಿಚಾರಣೆಯನ್ನು ಉನ್ನತ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ರಾಜ್ಯವು ನಿಗದಿಪಡಿಸಿದ ಬೆಲೆ ಹೆಚ್ಚಿದ್ದರೆ, ಕೇಂದ್ರವು ನಿಗದಿಪಡಿಸಿದ ಕನಿಷ್ಠ ಬೆಲೆ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಈ ಮೊದಲು ಕಬ್ಬಿಗೆ ಕನಿಷ್ಠ ಬೆಲೆ ನಿಗದಿ ಮಾಡಿದ ಬಳಿಕವೂ ಯುಪಿ ಸರ್ಕಾರಕ್ಕೆ ಅಥವಾ ರಾಜ್ಯ ಕಬ್ಬಿನ ಆಯುಕ್ತರಿಗೆ ಬೆಲೆ ನಿಗದಿ ಮಾಡುವ ಅಧಿಕಾರವಿದೆಯೇ ಎಂದು ಉತ್ತರ ಪ್ರದೇಶ ಕಬ್ಬಿನ ಕಾರ್ಖಾನೆ ಸಂಘ ಸಲ್ಲಿಸಿದ್ದ ಮನವಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

ಕೇಂದ್ರವು ನಿಗದಿಪಡಿಸಿದ ಬೆಲೆ ಶಾಸನಬದ್ಧ ಕನಿಷ್ಠ ಬೆಲೆ ಮತ್ತು ರಾಜ್ಯವು ನಿಗದಿಪಡಿಸಿದ ಬೆಲೆ ಸಲಹಾ ಕನಿಷ್ಠ ಬೆಲೆಯಾಗಿರಲಿದೆ ಎಂದು ಕೋರ್ಟ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.