ETV Bharat / bharat

ಪುಲ್ವಾಮಾ ಎನ್​ಕೌಂಟರ್​: ಓರ್ವ ಉಗ್ರ ಹತ, ಇನ್ನೋರ್ವ ಶರಣಾಗತಿ - ಪುಲ್ವಾಮಾದಲ್ಲಿ ಉಗ್ರ ಹತ

ಇಂದು ಬೆಳ್ಳಂ ಬೆಳಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ಎನ್​ಕೌಂಟರ್ ನಡೆಸಿದ ಭದ್ರತಾ ಪಡೆ ಉಗ್ರನನ್ನು ಹೊಡೆದುರುಳಿಸಿದ್ದು, ಇನ್ನೋರ್ವ ಉಗ್ರ ಶರಣಾಗಿದ್ದಾನೆ.

Militant killed in encounter with security forces in J-K's Pulwama
ಪುಲ್ವಾಮಾ ಎನ್​ಕೌಂಟರ್
author img

By

Published : Nov 6, 2020, 10:19 AM IST

Updated : Nov 6, 2020, 11:36 AM IST

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ರಾತ್ರಿಯಿಡೀ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರ ಹತನಾಗಿದ್ದಾನೆ. ಇನ್ನೋರ್ವ ಉಗ್ರ ಶರಣಾಗಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಪುಲ್ವಾಮಾ ಎನ್​ಕೌಂಟರ್

ಉಗ್ರರು ಅಡಗಿರುವ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ನಿನ್ನೆ ದಕ್ಷಿಣ ಕಾಶ್ಮೀರದ ಪಾಂಪೋರ್​ನ ಲಾಲ್ಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು, ಇಬ್ಬರು ನಾಗರೀಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ ಲಾಲ್ಪೋರಾ ಪ್ರದೇಶದವನ್ನು ಸುತ್ತುವರಿದ ಭದ್ರತಾ ಪಡೆ ಇಂದು ಬೆಳ್ಳಂ ಬೆಳಗ್ಗೆ ಎನ್​ಕೌಂಟರ್ ನಡೆಸಿ ಉಗ್ರನನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ಮುಂದುವರೆಸಿದೆ.

Last Updated : Nov 6, 2020, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.