ಹೈದರಾಬಾದ್: ಲಾಕ್‌ಡೌನ್‌ನಿಂದಾಗಿ ತಮ್ಮ ತಮ್ಮ ಊರಿಗೆ ಮರಳಲಾಗದೆ ಸಹನೆ ಕಳೆದುಕೊಂಡ ವಲಸೆ ಕಾರ್ಮಿಕರು, ಪೊಲೀಸರ ಮೇಲೆ ಕೋಲು ಮತ್ತು ಕಲ್ಲುಗಳಿಂದ ದಾಳಿ ನಡೆಸಿರುವ ಘಟನೆ ಹೈದರಾಬಾದ್ ಐಐಟಿಯಲ್ಲಿ ನಡೆದಿದೆ.
ಸಂಗಾರೆಡ್ಡಿ ಜಿಲ್ಲೆಯ ಕಂಧಿ ಗ್ರಾಮದಲ್ಲಿರುವ ಐಐಟಿ ಹೈದರಾಬಾದ್‌ನಲ್ಲಿ ವಲಸೆ ಕಾರ್ಮಿಕರು, ಪೊಲೀಸರ ಮೇಲೆ ಕಲ್ಲು ಮತ್ತು ಕೋಲುಗಳಿಂದ ಹಲ್ಲೆ ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಮ್ಮ ಮನೆಗಳಿಗೆ ಮರಳಲಾಗದೆ ತಾಳ್ಮೆ ಕಳೆದುಕೊಂಡ ಕಾರ್ಮಿಕರು ಪೊಲೀಸ್ ವಾಹನಗಳ ಮುಗಿಬಿದ್ದರು.
ಐಐಟಿ ಹೈದರಾಬಾದ್ ನಿರ್ಮಾಣಕ್ಕಾಗಿ ಸಂಗರೆಡ್ಡಿಗೆ ಬಂದ ಕಾರ್ಮಿಕರನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಐಐಟಿ ಮ್ಯಾನೇಜ್‌ಮೆಂಟ್ ಅಲ್ಲೇ ಲಾಕ್ ಮಾಡಿದೆ. ಹೀಗಾಗಿ ತಿಂಗಳುಗಳಿಂದ ಕೆಲಸ ಮತ್ತು ಆದಾಯವಿಲ್ಲದೆ ಇರುವ ಕಾರ್ಮಿಕರು ಕೋಪಗೊಂಡಿದ್ದಾರೆ. ಹೀಗಾಗಿ ತಮ್ಮ ಮನೆಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ, ಪೊಲೀಸರು ಅವರನ್ನು ತಡೆದಿದ್ದಾರೆ. ಹೀಗಾಗಿ ಕಾರ್ಮಿಕರು ಕಲ್ಲುಗಳು ಮತ್ತು ಕೋಲುಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ:
ಐಐಟಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಗಮನಕ್ಕೆ ಬರುತ್ತಿದ್ದಂತೆಯೇ, ಎಸ್ಪಿ ಚಂದ್ರಶೇಖರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಕಾರ್ಮಿಕರ ಮನವೊಲಿಸಲು ಪ್ರಯತ್ನ ನಡೆಸಿದರು. ಇದಕ್ಕೆ ಬಗ್ಗದ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಕಾರ್ಮಿಕರಿಗೆ ಎಸ್ಪಿ ನೀಡಿದ್ದಾರೆ.