ಪಣಜಿ (ಗೋವಾ) : ಅರಬ್ಬಿ ಸಮುದ್ರದಲ್ಲಿ ನವೆಂಬರ್ 26ರಂದು ಮಿಗ್-29ಕೆ ತರಬೇತಿ ವಿಮಾನ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಪೈಲೆಟ್ ಪತ್ತೆ ಹಚ್ಚಲು 9 ಯುದ್ಧನೌಕೆಗಳು, 14 ಏರ್ಕ್ರಾಫ್ಟ್ಗಳು ಹಾಗೂ ತನ್ನ ಫಾಸ್ಟ್ ಇಂಟರ್ಸೆಪ್ಟರ್ ಕ್ರಾಫ್ಟ್ಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಭಾರತೀಯ ನೌಕಾಪಡೆ ಹೇಳಿದೆ.
ಈ ಬಗ್ಗೆ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತೀಯ ನೌಕಾ ಪಡೆ, ಸಮುದ್ರದಲ್ಲಿ ಪತನವಾದ ನೌಕೆಯ ಕೆಲ ಅವಶೇಷಗಳು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.
ಪೈಲೆಟ್ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. 9 ಯುದ್ಧ ನೌಕೆಗಳು, 14 ಏರ್ಕ್ರಾಫ್ಟ್ಗಳು ಶೋಧಕಾರ್ಯದಲ್ಲಿ ಪಾಲ್ಗೊಂಡಿವೆ. ಫಾಸ್ಟ್ ಇಂಟರ್ಸೆಪ್ಟರ್ ಕ್ರಾಫ್ಟ್ ಅನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಾರಗರೋತ್ತರ ಮತ್ತು ಕರಾವಳಿ ಪೊಲೀಸರೂ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮೀನುಗಾರಿಕೆ ಮಾಡುವ ಸ್ಥಳೀಯ ಗ್ರಾಮಗಳಿಗೂ ವಿಷಯ ಮುಟ್ಟಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಪಘಾತ ಸಂಭವಿಸಿದ ವಿಮಾನದಲ್ಲಿದ್ದ ಇನ್ನೊಬ್ಬ ಪೈಲಟ್ನನ್ನು ರಕ್ಷಿಸಲಾಗಿದೆ. ಮಿಗ್ -29ಕೆ ವಿಮಾನವು ಐಎನ್‌ಎಸ್ ವಿಕ್ರಮಾದಿತ್ಯದಿಂದ ಕಾರ್ಯ ನಿರ್ವಹಿಸುತ್ತಿತ್ತು.