ETV Bharat / bharat

ಅಮೆರಿಕದಲ್ಲಿ ಟಿಕ್​ಟಾಕ್​ ಖರೀದಿಯ ಮಾತುಕತೆಯನ್ನು ಮತ್ತೆ ಮುಂದುವರೆಸಿದ ಮೈಕ್ರೋಸಾಫ್ಟ್​​​ - ಬೈಟ್​ಡಾನ್ಸ್​​

ಚೀನಾ ಮೂಲದ ಪ್ರಸಿದ್ಧ ವಿಡಿಯೋ ಅಪ್ಲಿಕೇಷನ್​ ಟಿಕ್​​ಟಾಕ್​ ಅನ್ನು ಖರೀದಿಸುವ ಮಾತುಕತೆಗೆ ಮತ್ತೆ ಮೈಕ್ರೋಸಾಫ್ಟ್​ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

microsoft
ಮೈಕ್ರೋಸಾಫ್ಟ್​
author img

By

Published : Aug 3, 2020, 4:00 PM IST

ಸ್ಯಾನ್​ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕದಲ್ಲಿನ ಚೀನಾ ಮೂಲದ ಪ್ರಸಿದ್ಧ ವಿಡಿಯೋ ಅಪ್ಲಿಕೇಷನ್​ ಟಿಕ್​​ಟಾಕ್​ ಅನ್ನು ಖರೀದಿಸುವ ಮಾತುಕತೆಗೆ ಮತ್ತೆ ಮೈಕ್ರೋಸಾಫ್ಟ್​ ಮುಂದಾಗಿದ್ದು, ಬಹುತೇಕ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 15ರ ವೇಳೆಗೆ ಈ ಮಾತುಕತೆಗಳು ಪೂರ್ಣಗೊಳ್ಳಲಿವೆ ಎಂದು ಮೈಕ್ರೋಸಾಫ್ಟ್​ ದೃಢಪಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಮೈಕ್ರೋಸಾಫ್ಟ್​ ಚೀನಾ ಮೂಲದ ಟಿಕ್​ಟಾಕ್​ ಅನ್ನು ಕೊಂಡುಕೊಳ್ಳಲು ಮುಂದಾಗಿತ್ತು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಎಚ್ಚರಿಕೆಯ ಮೇರೆಗೆ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು.

ಅಮೆರಿಕದ ವಾಲ್​ಸ್ಟ್ರೀಟ್ ಜರ್ನಲ್ ಹೇಳುವಂತೆ ಟಿಕ್​ ಟಾಕ್​ನ ಮಾತೃಸಂಸ್ಥೆ ಬೈಟ್​ಡಾನ್ಸ್​​ ಹಾಗೂ ಮೈಕ್ರೋಸಾಫ್ಟ್​ನೊಂದಿಗೆ ಮಾತುಕತೆಗಳು ನಡೆದಿದ್ದು, ಒಪ್ಪಂದದ ಹಂತಕ್ಕೆ ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಎಚ್ಚರಿಕೆಯಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಸಂದೇಹ ಎಂದು ಸ್ಪಷ್ಟಪಡಿಸಿದೆ.

ಇದೇ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್​ ಅಮೆರಿಕ ಸರ್ಕಾರದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಈ ವೇಳೆ ಅಮೆರಿಕ ಅಧ್ಯಕ್ಷರ ಹಿತಾಸಕ್ತಿಯನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಆದರೆ ಅಮೆರಿಕನ್ನರ ಮಾಹಿತಿ, ಖಾಸಗಿತನ ರಕ್ಷಣೆಯೊಂದಿಗೆ ಆರ್ಥಿಕತೆಗೆ ನೆರವಾಗುತ್ತೇವೆ ಎಂದು ಹೇಳಿಕೊಂಡಿದೆ.

ಇದರ ಜೊತೆಯಲ್ಲಿ ಸೆಪ್ಟೆಂಬರ್ 15ರ ನಂತರ ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಮುಕ್ತಾಯವಾಗಲಿದ್ದು, ಅಮೆರಿಕ ಸೇರಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​​ ರಾಷ್ಟ್ರಗಳಲ್ಲಿ ಟಿಕ್​ಟಾಕ್​ ಅನ್ನು ಕಂಪನಿ ಕಾರ್ಯಾಚರಣೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಲಿದೆ ಎಂದು ಮೈಕ್ರೋಸಾಫ್ಟ್​ ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ತಿಂಗಳಿಗೆ 20 ಮಿಲಿಯನ್​ ಮಂದಿ ಟಿಕ್​ಟಾಕ್​ ಅನ್ನು ಬಳಸುತ್ತಿದ್ದು, ಅತಿ ಹೆಚ್ಚು ಆದಾಯ ದೇಶದಿಂದ ಹೊರ ಹೋಗುತ್ತಿದೆ. ಇದರ ಬೆನ್ನಲ್ಲೇ ಚೀನಾ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡುವ ಎಚ್ಚರಿಕೆಯೂ ಕೂಡಾ ಟಿಕ್​ ಟಾಕ್​ ಅನ್ನು ನಿದ್ದೆಗೆಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.