ETV Bharat / bharat

ಕೇಂದ್ರದಿಂದ ಅನ್​ಲಾಕ್​ 2.0 ಮಾರ್ಗಸೂಚಿ ಪ್ರಕಟ: ಮತ್ತಷ್ಟು ಸಡಿಲಿಕೆ

ದೇಶದಲ್ಲಿ ಇದೀಗ ಅನ್​ಲಾಕ್​ 2.0 ಜಾರಿಗೊಳ್ಳಲಿದ್ದು, ಕೇಂದ್ರ ಗೃಹ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.

MHA announces Unlock 2 guidelines
MHA announces Unlock 2 guidelines
author img

By

Published : Jun 29, 2020, 10:54 PM IST

ನವದೆಹಲಿ: ದೇಶಾದ್ಯಂತ ದಿನದಿಂದ ದಿನಕ್ಕೆ ಕೋವಿಡ್​ ಸೋಂಕು ಹೆಚ್ಚಾಗುತ್ತಿದ್ದು, ಇದರ ಮಧ್ಯೆ ಕೇಂದ್ರ ಸರ್ಕಾರದಿಂದ ಅನ್​ಲಾಕ್​​ 2.0 ಮಾರ್ಗಸೂಚಿ ಪ್ರಕಟಗೊಂಡಿದೆ. ಕಂಟೈನ್ಮೆಂಟ್​​​ ಝೋನ್​ ಬಿಟ್ಟು ಬೇರೆ ವಲಯಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡಲಾಗಿದೆ.

MHA announces Unlock 2 guidelines
ಕೇಂದ್ರದಿಂದ ಅನ್​ಲಾಕ್​ 2.0 ಮಾರ್ಗಸೂಚಿ ಪ್ರಕಟ

ಸದ್ಯ ಜಾರಿಯಲ್ಲಿರುವ ಅನ್​ಲಾಕ್​ 1.0 ಈ ತಿಂಗಳು ಅಂತ್ಯಗೊಳ್ಳಲಿದ್ದು, ಹೀಗಾಗಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ?

  • ಜುಲೈ 31ರವರೆಗೆ ಶಾಲಾ, ಕಾಲೇಜ್​ ಹಾಗೂ ತರಬೇತಿ ಕೇಂದ್ರ ತೆರೆಯುವಂತಿಲ್ಲ.
  • ಮೆಟ್ರೋ ರೈಲು, ಸಿನಿಮಾ ಥೀಯೇಟರ್​, ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್, ಪಾರ್ಕ್‍ಗಳು, ಬಾರ್, ಸಭಾ ಭವನಗಳು ಹಾಗೂ ಹೆಚ್ಚು ಜನ ಸೇರುವ ಪ್ರದೇಶ ತೆರೆಯುವಂತಿಲ್ಲ
  • ಪ್ರತಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ
  • ಅಂಗಡಿಗಳಲ್ಲಿ 5ಕ್ಕಿಂತಲೂ ಹೆಚ್ಚು ಜನರು ಇರಲು ಅವಕಾಶ
  • ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗೆ ಹಂತ ಹಂತವಾಗಿ ಅವಕಾಶ
  • ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು 6 ಅಡಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ
  • ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ.
  • ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡ
    MHA announces Unlock 2 guidelines
    ಕೇಂದ್ರದಿಂದ ಅನ್​ಲಾಕ್​ 2.0 ಹೊಸ ಮಾರ್ಗಸೂಚಿ
  • ವರ್ಕ್ ಫ್ರಂ ಹೋಮ್​ಗೆ ಮೊದಲ ಆದ್ಯತೆ
  • ಕೆಲಸದ ಸ್ಥಳ, ಮಾರುಕಟ್ಟೆ, ಮಾಲ್, ಧಾರ್ಮಿಕ ಕೇಂದ್ರಗಳ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.