ಲಂಡನ್: ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಸಿಂಧ್ನಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಅಪ್ರಾಪ್ತೆ ಮೆಹಕ್ ಕುಮಾರಿಗೆ ನ್ಯಾಯ ಒದಗಿಸುವಂತೆ ಭಾರತೀಯ ಮೂಲದ ಪ್ರಜೆಗಳು ಲಂಡನ್ನಲ್ಲಿ ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:
ಸಿಂಧ್ ಪ್ರಾಂತ್ಯದ ಜಾಕೋಬಾಬಾದ್ ನಿವಾಸಿಯಾಗಿದ್ದ 14 ವರ್ಷದ ಮೆಹೆಕ್ ಕುಮಾರಿಯನ್ನು ಆಲಿ ರಾಜಾ ಎಂಬ ಮಧ್ಯವಯಸ್ಕ ವ್ಯಕ್ತಿ ಜನವರಿ 15 ರಂದು ಅಪಹರಿಸಿದ್ದ. ಬಳಿಕ ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಅಂದೇ ವಿವಾಹ ಮಾಡಿಕೊಂಡಿದ್ದ. ಹೀಗಾಗಿ ಅವಳಿಗೆ ನ್ಯಾಯ ಒದಗಿಸುವಂತರ ಒತ್ತಾಯಿಸಿ ಲಂಡನ್ನಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ.