ETV Bharat / bharat

ಆರು ತಿಂಗಳಲ್ಲಿ 82 ಲಕ್ಷ ರೂ. ಖರ್ಚು ಮಾಡಿದ್ದ ಮುಫ್ತಿ: ಒಂದೇ ದಿನ 28 ಲಕ್ಷ ರೂ. ವ್ಯಯ! - 82 ಲಕ್ಷ ರೂ ಖರ್ಚು ಮಾಡಿರುವ ಮುಫ್ತಿ

ಮೆಹಬೂಬಾ ಮುಫ್ತಿ ಸಿಎಂ ಆಗಿದ್ದ ವೇಳೆ ಅವರ ಅಧಿಕೃತ ನಿವಾಸಕ್ಕಾಗಿ ಸರ್ಕಾರದ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಆರ್​ಟಿಐ ಅಡಿ ತಿಳಿದು ಬಂದಿದೆ.

Mehbooba as CM
Mehbooba as CM
author img

By

Published : Jan 5, 2021, 5:28 PM IST

ಜಮ್ಮು: ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ 2018ರ ಜನವರಿಯಿಂದ ಜೂನ್​ವರೆಗೆ ಅಂದರೆ ಆರು ತಿಂಗಳಲ್ಲಿ ಬರೋಬ್ಬರಿ 82 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಅರ್ಜಿ ಮೂಲಕ ತಿಳಿದು ಬಂದಿದ್ದು, ಒಂದೇ ದಿನ 28 ಲಕ್ಷ ರೂ. ವೆಚ್ಚ ಮಾಡಿದ್ದಾರಂತೆ.

ಜಮ್ಮು-ಕಾಶ್ಮೀರ ಮೂಲದ ಸಾಮಾಜಿಕ ಕಾರ್ಯಕರ್ತೆ ಇನಾಮ್​-ಉನ್​-ನಬಿ ಸೌದಾಗರ್​ ಸಲ್ಲಿಸಿದ ಆರ್​ಟಿಐ ಅರ್ಜಿಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಮೆಹಬೂಬಾ ಮುಫ್ತಿ ಶ್ರೀನಗರದ ಗುಪ್ಕರ್​ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದ ನವೀಕರಣಕ್ಕಾಗಿ ಸುಮಾರು 82 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಹಣ ಭಾರತ ಸರ್ಕಾರ ಪಾವತಿ ಮಾಡಿದ್ದಾಗಿ ಮಾಹಿತಿ ಬಹಿರಂಗಗೊಂಡಿದೆ.

ಓದಿ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು, ಪೊಲೀಸ್ ಠಾಣೆಗೆ ಹೋದ ಯುವತಿ!

ಹೊಸ ನಿವಾಸಕ್ಕಾಗಿ ಪೀಠೋಪಕರಣಗಳು, ಟಿವಿಗಳು ಮತ್ತು ಇತರ ವಸ್ತುಗಳಿಗಾಗಿ ಮುಫ್ತಿ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ಜೂನ್​ 2018ರಲ್ಲೇ ಅವರು 22 ಲಕ್ಷ ರೂ. ಮೌಲ್ಯದ ಎಲ್​ಇಡಿ ಟಿವಿ ಹಾಗೂ ಇತರೆ ವಿವಿಧ ವಸ್ತುಗಳನ್ನು ಖರೀದಿ ಮಾಡಿದ್ದು, ಮಾರ್ಚ್​ 2018ರಲ್ಲಿ ಒಂದೇ ದಿನ ರತ್ನಗಂಬಳಿ ಖರೀದಿಗಾಗಿ 28 ಲಕ್ಷ ರೂ. ವ್ಯಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಜತೆಗೆ 11,62,000 ರೂ.ಗಳ ಬೆಡ್​ಶೀಟ್​ 2018ರ ಫೆಬ್ರವರಿ 22ರಂದು ಖರೀದಿ ಮಾಡಿದ್ದು, ಆಗಸ್ಟ್ 2016ರಿಂದ ಜುಲೈ 2018ರವರೆಗೆ ಎರಡು ವರ್ಷಗಳ ಅವಧಿಯಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಕಟ್ಲರಿ ವಸ್ತು ಸಹ ಖರೀದಿ ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ಹಣ ಎಂಬುದು ಇದೀಗ ಬಹಿರಂಗಗೊಂಡಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್​ 370 ರದ್ದುಗೊಳಿಸಿದ ನಂತರ ಅವರನ್ನ ಗೃಹ ಬಂಧನದಲ್ಲಿ ಇಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.