ಆಗ್ರಾ: ಜಗತ್ತಿನ ಎಂಟು ಅದ್ಭುತ ತಾಣಗಳಲ್ಲಿ ಒಂದಾದ ಆಗ್ರಾದ ತಾಜ್ಮಹಲ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ನಿನ್ನೆ ಭೇಟಿ ನೀಡಿ ತಾಜ್ ಸೌಂದರ್ಯ ಕಣ್ತುಂಬಿಕೊಂಡಿದ್ದರು. ತಾಜ್ಮಹಲ್ನ ಹಿಂದಿರುವ ಕಥೆಗೆ ಟ್ರಂಪ್ ದಂಪತಿ ಬೆರಗಾಗಿದ್ದರು. ಈ ಬಗ್ಗೆ ಟ್ರಂಪ್ಗೆ ಗೈಡ್ ಆಗಿದ್ದ ನಿತಿನ್ ಕುಮಾರ್ ಮಾತನಾಡಿದ್ದಾರೆ.
ತಾಜ್‌ಮಹಲ್ ಕಟ್ಟಿದ್ದರ ಹಿಂದಿನ ಕಥೆಯಾದ "ಮೊಘಲ್ ದೊರೆ ಷಹಜಹಾನ್ ಮತ್ತು ಅವರ ಹೆಂಡತಿ ಮುಮ್ತಾಜ್ ಅವರ ಕಥೆ ಕೇಳಿ ಟ್ರಂಪ್ ಭಾವುಕಗೊಂಡರು. ಷಹಜಹಾನ್‌ನ ಅವರ ಮಗ ಔರಂಗಜೇಬನೇ ಗೃಹ ಬಂಧನದಲ್ಲಿಟ್ಟು, ಅವರು ಸತ್ತಾಗ ಮುಮ್ತಾಜ್ ಗೋರಿ ಪಕ್ಕದಲ್ಲೇ ಸಮಾಧಿ ಮಾಡಿದ್ದರ ಈ ಕಥೆ ಕೇಳಿ ಟ್ರಂಪ್ ಮೂಕವಿಸ್ಮಿತರಾದರು." ಎಂದು ನಿತಿನ್ ಕುಮಾರ್ ಹೇಳಿದ್ದಾರೆ.
ಮೆಲಾನಿಯಾ ಟ್ರಂಪ್ ಅವರು ಮಣ್ಣಿನ ಪ್ಯಾಕ್ ಚಿಕಿತ್ಸೆ ಅವರಲ್ಲಿ ಹೆಚ್ಚು ಕುತೂಹಲ ಮೂಡಿಸಿತು. ಆ ಬಗ್ಗೆ ಮೆಲಾನಿಯಾ ಟ್ರಂಪ್ ಹೆಚ್ಚು ವಿವರ ಕೇಳಿ ತಿಳಿದುಕೊಂಡರು ಎಂದರು. "ತಾಜ್‌ಮಹಲ್ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಸೌಂದರ್ಯಕ್ಕೆ ಕಾಲಾತೀತವಾಗಿ ಸಾಕ್ಷಿಯಾಗಿದೆ" ಧನ್ಯವಾದಗಳು ಭಾರತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ತಾಜ್ಮಹಲ್ನ ವಿಸಿಟರ್ಸ್ ಬುಕ್ನಲ್ಲಿ ಬರೆದು ಸಹಿ ಹಾಕಿದ್ದಾರೆ.
ಟ್ರಂಪ್ ದಂಪತಿಗೆ ತಾಜ್‌ಮಹಲ್ ಬಗ್ಗೆ ವಿವರಿಸಿದ್ದ ನಿತಿನ್‌ಕುಮಾರ್ ಅವರು ಇಲ್ಲಿ ಗೈಡ್ ಆಗಿ ಖ್ಯಾತರಾಗಿದ್ದಾರೆ. ಈ ಜಾಗಕ್ಕೆ ವಿಶೇಷ ಅತಿಥಿಗಳು ಬಂದಾಗ ಇವರೇ ಹೆಚ್ಚಾಗಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಾರೆ. ಇವರ ವಿವರಣಾ ಶೈಲಿ ಮೆಚ್ಚಿ ಅನೇಕ ಗಣ್ಯರು ಇವರ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದುಂಟು. ಡೊನಾಲ್ಡ್ ಟ್ರಂಪ್,ನಿತಿನ್ ಕುಮಾರ್ ಅವರನ್ನು ಮೆಚ್ಚಿ ಬ್ಯಾಡ್ಜ್ ನೀಡಿ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ.