ETV Bharat / bharat

ಗ್ವಾಲಿಯರ್​ ಹೈವೇನಲ್ಲೇ ಧರಣಿ ಕುಳಿತ ಮೇಧಾ ಪಾಟ್ಕರ್; ಸರ್ಕಾರದ ವಿರುದ್ಧ ಘೋಷಣೆ

ಧರಣಿ ಕುಳಿತ ಮೇಧಾ ಪಾಟ್ಕರ್ ಹಾಗೂ ಬೆಂಬಲಿಗರು ಸರ್ಕಾರದ ವಿರುದ್ಧವಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇನ್ನು ಧರಣಿ ನಿರತರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

author img

By

Published : Nov 26, 2020, 4:04 PM IST

Medha Patkar
ಮೇಧಾ ಪಾಟ್ಕರ್

ಆಗ್ರಾ(ಉತ್ತರ ಪ್ರದೇಶ): ಮೇಧಾ ಪಾಟ್ಕರ್ ತಮ್ಮ ಬೆಂಬಲಿಗರು ಹಾಗೂ ಕೆಲ ರೈತ ಮುಖಂಡರೊಂದಿಗೆ ತೆರಳುತ್ತಿರುವ ಸಂದರ್ಭ ಪೊಲೀಸರು ತಡೆದ ಕಾರಣ ಹೆದ್ದಾರಿಯಲ್ಲೇ ಧರಣಿ ಕುಳಿತ ಘಟನೆ ನಡೆದಿದೆ.

ಧರಣಿ ನಿರತ ಮೇಧಾ ಪಾಟ್ಕರ್

ಮೇಧಾ ತಮ್ಮ ಬೆಂಬಲಿಗರು ಹಾಗೂ ಕೆಲ ರೈತ ಮುಖಂಡರೊಂದಿಗೆ ಸಂಜೆ ಗಡಿಭಾಗದಲ್ಲಿ ತೆರಳುತ್ತಿರುವ ಸಂದರ್ಭ ಪೊಲೀಸರು ತೆರಳದಂತೆ ತಡೆಹಿಡಿದಿದ್ದರು. ಬಳಿಕ ಅಲ್ಲೇ ಶಿಬಿರದಲ್ಲಿ ತಂಗಿದ್ದ ಅವರ ತಂಡ ಮುಂಜಾನೆ ಎದ್ದು ಮತ್ತೆ ತಮ್ಮ ಪ್ರಯಾಣ ಮುಂದುವರೆಸಿದ್ದರು. ಈ ಸಂದರ್ಭ ಆಗ್ರಾ ಪಶ್ಚಿಮ ವಿಭಾಗದ ಪೊಲೀಸ್ ರವಿ ಕುಮಾರ್ ಮೇಧಾ ಮತ್ತವರ ಬೆಂಬಲಿಗರೊಂದಿಗೆ ಮಾತನಾಡಲು ತೆರಳಿದ್ದರು. ಆದರೆ, ಆ ಪ್ರದೇಶದಿಂದ ಅವರನ್ನು ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಲಿಲ್ಲ. ಹಾಗಾಗಿ ಪೊಲೀಸ್​ ಅವರನ್ನು ಮುಂದೆ ಹೋಗುವುದನ್ನು ತಡೆದಿದ್ದಾರೆ. ಇದರಿಂದ ಕ್ರೋಧಗೊಂಡ ಮೇಧಾ ಹಾಗೂ ಬಳಗ ರಸ್ತೆ ಮಧ್ಯದಲ್ಲಿಯೇ ಧರಣಿಗಿಳಿದೆ.

ಧರಣಿ ಕುಳಿತ ಮೇಧಾ ಪಾಟ್ಕರ್ ಹಾಗೂ ಬೆಂಬಲಿಗರು ಸರ್ಕಾರದ ವಿರುದ್ಧವಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇನ್ನು ಧರಣಿ ನಿರತರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಧರಣಿ ಕುಳಿತ ಕಾರಣ ವಾಹನ ಸಂಚಾರಕ್ಕೂ ಅಡಚನೆಯಾಗಿ ಆಗ್ರಾ-ಗ್ವಾಲಿಯರ್ ರಸ್ತೆ ಸಂಪೂರ್ಣ ಸ್ಥಗಿತಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.